ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಸಂಜಯ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದ ಅನ್ನದಾತರು ಕತ್ತೆಗಳೊಂದಿಗೆ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರ, ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಗಳು, ಪ್ರಾಧಿಕಾರವನ್ನು ಕತ್ತೆಗಳಿಗೆ ಹೋಲಿಸಿ ಅಣಕಿಸಿದರು.
ಮೂರು ಕತ್ತೆಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಪ್ರಾಧಿಕಾರಕ್ಕೆ ಹೋಲಿಸಿ, ಕತ್ತೆಗಳಿಗೇನು ಗೊತ್ತು ಕಸ್ತೂರಿ ವಾಸನೆ ಅಲ್ಲ, ಕತ್ತೆಗೇನು ಗೊತ್ತು ಕಾವೇರಿಯ ವಾಸ್ತವ ಸ್ಥಿತಿ ಎಂದು ಅಣಕವಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.