ಮಂಡ್ಯ: ಕಾವೇರಿ ನದಿ ನಿರ್ವಾಹಣಾ ಪ್ರಾಧಿಕಾರ ನೀರು ಬೀಡಲು ಆದೇಶ ಕೊಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಪ್ರಾಧಿಕಾರದ ಆದೇಶ ಪಾಲನೆಯನ್ನ ರಾಜ್ಯ ಸರ್ಕಾರ ಮಾಡಬಾರದು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಪಕ್ಷ ಸಭೆಯನ್ನ ಕೇಂದ್ರಕ್ಕೆ ಕೊಂಡೊಗಬೇಕು. ನೀರಾವರಿ ಸಚಿವ ಹಾಗೂ ಪ್ರಧಾನಿ ಬಳಿ ಮಾತನಾಡಬೇಕು ಎಂದು ಆಗ್ರಹಿಸಿದರು.
ನೀರು ನಿಲ್ಲಿಸಿ ರೈತರ ಹಿತಕಾಯುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲವಾದರೆ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ಅನ್ನದಾನಿ ಎಚ್ಚರಿಕೆ ನೀಡಿದರು.
ರೈತರ ಹಿತಕ್ಕಿಂತ ಸರ್ಕಾರ ಉಳಿಸಿಕೊಳ್ಳುವ ದಿಗಿಲು. ಏನಾದ್ರು ಆಗಲಿ ನಮ್ಮ ಸರ್ಕಾರ ಉಳಿಸಿಕೊಳ್ಳಲು ಹೋರಾಟ ಮಾಡ್ತಿದ್ದಾರೆ. ಸುಪ್ರೀಂ ಕೋರ್ಟ್ ನಮ್ಮನ್ನ ವಜಾ ಮಾಡ್ತಾರೆ ಅನ್ನೊ ಭಯ. ಕಾನೂನು ಚೌಕಟ್ಟಿನ ಭಯ. ಪ್ರಾಧಿಕಾರಕ್ಕೆ, ಸುಪ್ರೀಂ ಕೋರ್ಟ್ ಗೆ ಸರ್ಕಾರ ಮನವರಿಕೆ ಮಾಡಿಕೊಡ್ತಿಲ್ಲ. ವಾಸ್ತವಾಂಶದ ಬಗ್ಗೆ ಮಾಹಿತಿ ಕೊಡ್ತಿಲ್ಲ. ಸರಿಯಾದ ಅಂಕಿಅಂಶ ನೀಡದ ಕಾರಣ ಪದೇ ಪದೇ ದುರ್ಘತಿ ಸಂದರ್ಭದ ಬರ್ತಿದೆ ಎಂದು ಆರೋಪಿಸಿದರು.
ಕಾವೇರಿ ಹೋರಾಟದಲ್ಲಿ ಚಿತ್ರನಟರು ಭಾಗವಹಿಸದ ವಿಚಾರವಾಗಿ ಪ್ರತಿಕ್ರಿಯಿಸಿ, ನಟರು ಬರಿ ರಾಜಕೀಯಕ್ಕೆ ಮಾತ್ರ ಸೀಮಿತ. ರಾಜಕೀಯ ನಡೆಯುವ ಸಂದರ್ಭದಲ್ಲಿ ಬರ್ತಾರೆ ಹೋಗ್ತಾರೆ ಅಷ್ಟೆ. ಚುನಾವಣೆ ಸಂದರ್ಭದಲ್ಲಿ ಇಡೀ ಚಿತ್ರರಂಗದವರು ಬಂದು ಪ್ರಚಾರ ಮಾಡಿದ್ರು.ಎಲ್ಲಿದ್ದಾರೆ ಈಗ ಇವರು ಚಳವಳಿಗೆ ಯಾಕೆ ಬರುತ್ತಿಲ್ಲ. ಚುನಾವಣೆಯಲ್ಲಿ ಅವರ ಕಡೆಯವರು ಗೆಲ್ಕಬೇಕು ಅದಕ್ಕೆ ಬಂದು ಶೋ ಕೊಟ್ಟರು ಅಷ್ಟೆ.
ಅವರಿಗೆ ನೀರು ರೈತರು ಬೇಕಾಗಿಲ್ಲ ಒಬ್ಬರನ್ನ ಗೆಲ್ಲಿಸೋದು ಮಾತ್ರ ಅಲ್ಲ. ರೈತರ ಹಿತ ಕಾಯುವ ಕೆಲಸವನ್ನು ಕೂಡ ಮಾಡಬೇಕು ಎಂದು ಒತ್ತಾಯಿಸಿದರು.