Sunday, April 20, 2025
Google search engine

Homeಸ್ಥಳೀಯಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ವಚನಭ್ರಷ್ಟ ಸರ್ಕಾರದ ವಿರುದ್ಧ...

ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ವಚನಭ್ರಷ್ಟ ಸರ್ಕಾರದ ವಿರುದ್ಧ ರೈತರಿಂದ ರಸ್ತೆ ತಡೆ, ಪ್ರತಿಭಟನೆ


ಮೈಸೂರು: ಕಾವೇರಿ ಭಾಗದ ಜಲಾಶಯಗಳಲ್ಲಿ ಕುಡಿಯ ನೀರಿಗೂ ಬರ ಬಂದಿದೆ ಪ್ರಾಧಿಕಾರದ ಆದೇಶ ಪಾಲನೆ ಮಾಡಲು ಸಾಧ್ಯವಿಲ್ಲ ನೀರು ಹರಿಸುವುದಿಲ್ಲ ಎಂದು ರಾಜ್ಯದ ರೈತರಿಗೆ ಜನರಿಗೆ ಭರವಸೆ ನೀಡಿ
ರಾಜ್ಯ ಸರ್ಕಾರ ಕಾವೇರಿ ನೀರನ್ನು ಮತ್ತೆ ತಮಿಳುನಾಡಿಗೆ ಇಂದಿನಿಂದ 15 ದಿನಗಳವರೆಗೆ 5,000 ಕ್ಯೂಸಿಕ್ ನೀರನ್ನು ಬಿಡುತ್ತಿರುವುದನ್ನು ಖಂಡಿಸಿ ರಾಜ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂದೆ ದಿಡೀರನೆ ರಸ್ತೆ ತಡೆದು ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ಆಕ್ರೋಶದಿಂದ ಪ್ರತಿಭಟನೆ ನಡೆಸಿದರು

ಅಯ್ಯಯ್ಯೋ ಅನ್ಯಾಯ
ಕಾವೇರಿ ನಮ್ಮದು ಉಳಿಯಲಿ ಉಳಿಯಲಿ ನೀರು ಉಳಿಯಲಿ ರೈತ ದ್ರೋಹಿ ಸರ್ಕಾರಕ್ಕೆ ದಿಕ್ಕಾರ ವಚನಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ಆರಂಭಿಸಿದರು ಸಾವಿರಾರು ವಾಹನಗಳು ರಸ್ತೆಯಲ್ಲಿ ನಿಂತು ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಬಿಗುವಿನ ವಾತಾವರಣ ಏರ್ಪಟ್ಟಿತು.
ರಸ್ತೆ ತಡೆಯನ್ನು ನಡೆಸಿದ ಸಂದರ್ಭದಲ್ಲಿ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಮಾತನಾಡಿ, ಸರ್ಕಾರ ನುಡಿದಂತೆ ನಡೆಯುತ್ತಿಲ್ಲ ಕದ್ದುಮುಚ್ಚಿ ನೀರು ಬಿಡುತ್ತಿದೆ ಕಾವೇರಿ ಭಾಗದ ಜನರನ್ನ ಬಲಿಕೊಡುತ್ತಿದೆ ಬೆಂಗಳೂರು ಮೈಸೂರು ನಗರದ ಜನತೆಗೆ ಕುಡಿಯುವ ನೀರಿಗೂ ಸಮಸ್ಯೆ ತಂದೊಡುತ್ತಿದೆ ನೀರಾವರಿ ಸಚಿವರು ಬೇಜವಾಬ್ದಾರಿ ನಡವಳಿಕೆ ಸಮಸ್ಯೆಗೆ ಕಾರಣವಾಗಿದೆ ಕೂಡಲೇ ಸಚಿವ ಸ್ಥಾನ ಬದಲಾಯಿಸಬೇಕು, ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರಾಧಿಕಾರದ ಆದೇಶ ಧಿಕ್ಕರಿಸಬೇಕು ನೀರು ಅರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.
ಕೂಡಲೇ ಮೈಸೂರು ಬೆಂಗಳೂರು ನಗರಗಳ ಅಚ್ಚುಕಟ್ಟು ಭಾಗದ ರೈತರು ಜನಸಾಮಾನ್ಯರು ಜನಪ್ರತಿನಿಧಿಗಳಿಗೆ ಎಂಎಲ್ಎ ಗಳಿಗೆ ಸರಿಯಾದ ಪಾಠ ಕಲಿಸಬೇಕು ಇಲ್ಲದಿದ್ದರೆ ಎಲ್ಲರೂ ಸೇರಿ ಕುಡಿಯುವ ನೀರಿನ ಮರಣ ಶಾಸನ ಬರೆಯುತ್ತಾರೆ ತಕ್ಷಣದಿಂದಲೇ ಎಲ್ಲಾ ಸಂಘ ಸಂಸ್ಥೆಗಳು ಹೋರಾಟಕ್ಕಿಳಿದು ಸರ್ಕಾರಕ್ಕೆ ಬಿಸಿ ಮುಟಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ತೆರವುಗೊಳಿಸುವಂತೆ ರೈತರನ್ನು ಮನವೊಲಿಸಲು ಪೊಲೀಸರು ಮುಂದಾದರು ಇದಕ್ಕೆ ರೈತರು ಜಗ್ಗದೆ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ರೈತರು ಪೊಲೀಸರ ವಿರುದ್ಧ ತಿರುಗಿ ಬಿದ್ದಾಗ ಚಳುವಳಿ ನಿರತ ರೈತರನ್ನ ಬಂಧಿಸಿ ಮೈಸೂರಿನ ಸಿಎಆರ್ ಮೈದಾನಕ್ಕೆ ಕರೆದೊಯ್ದುರು ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಅಮ್ ಆದ್ಮಿ ಪಕ್ಷದ ರಂಗಯ್ಯ
ಕಬ್ಬು ಬೆಳೆಗಾರ ಸಂಘದ ಜಿಲ್ಲಾಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷರಾದ ಕುರುಬೂರು ಸಿದ್ದೇಶ್, ಹಾಡ್ಯ ರವಿ, ಕುರುಬೂರು ಪ್ರದೀಪ್, ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್, ಮಾರ್ಬಳ್ಳಿ ನೀಲಕಂಠಪ್ಪ, ಕಾಟೂರು ಮಾದೇವಸ್ವಾಮಿ, ಕೋಟೆ ಸುನಿಲ್, ಸಾತಗಳ್ಳಿ ಬಸವರಾಜ್, ಹಿರೇನಂದಿ ಮಹಾದೇವಪ್ಪ,
ಕೆಂಡಗಣ್ಣಸ್ವಾಮಿ, ಚಾಮರಾಜನಗರ ಮಹೇಶ್, ಚುಂಚುರಾಯನಹುಂಡಿ ಗಿರೀಶ್, ದೇವನೂರು ನಾಗೇಂದ್ರ ಸ್ವಾಮಿ, ಪಿ ರಾಜು ಇನ್ನು ಮುಂತಾದವರಿದ್ದರು

RELATED ARTICLES
- Advertisment -
Google search engine

Most Popular