ಮಂಡ್ಯ: ಒಂದು ಹನಿ ನೀರು ಬಿಡಲ್ಲ ಎನ್ನುತ್ತಲೇ ತಮಿಳುನಾಡಿಗೆ ಸರ್ಕಾರ ಮತ್ತಷ್ಟು ನೀರು ಹರಿಸಿದೆ.
ಪ್ರಾಧಿಕಾರದ ಆದೇಶ ಪಾಲಿಸಿ ಮಂಡ್ಯ ರೈತರಿಗೆ ಸರ್ಕಾರದ ಮೋಸ ಮಾಡಿದ್ದು, ತಮಿಳುನಾಡಿಗೆ ಕೆಆರ್ ಎಸ್ ಡ್ಯಾಂ ನಿಂದ 5 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ.
ಸರ್ಕಾರದ ಆದೇಶದಂತೆ ಡ್ಯಾಂ ಹೊರ ಹರಿವನ್ನು ಹೆಚ್ಚಿಸಿರೋ ಕಾ.ನೀ.ನಿ.ದ ಅಧಿಕಾರಿಗಳು ಕೆಆರ್ ಎಸ್ ಡ್ಯಾಂ ನಿಂದ 5,735 ಕ್ಯೂಸೆಕ್ ನೀರು ನೀರು ಬಿಡುಗಡೆ ಮಾಡಿದ್ದಾರೆ.
ತಮಿಳುನಾಡಿಗೆ ನೀರು ಬಿಟ್ಟು ಸೀಪೇಜ್ ನೀರು ಹೋಗುತ್ತಿದೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಸಮರ್ಥಿಸಿಕೊಂಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.