Sunday, April 20, 2025
Google search engine

Homeರಾಜ್ಯಸಿಎಂ ವಾಟ್ಸ್ ಆ್ಯಪ್ ಚಾನೆಲ್ ಗೆ ನಿರೀಕ್ಷೆ ಮೀರಿ ಸ್ಪಂದನೆ: ಒಂದೇ ವಾರದಲ್ಲಿ 50 ಸಾವಿರಕ್ಕೂ...

ಸಿಎಂ ವಾಟ್ಸ್ ಆ್ಯಪ್ ಚಾನೆಲ್ ಗೆ ನಿರೀಕ್ಷೆ ಮೀರಿ ಸ್ಪಂದನೆ: ಒಂದೇ ವಾರದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಚಂದಾದಾರರು

ಬೆಂಗಳೂರು: ಸರ್ಕಾರ ಆರಂಭಿಸಿದ ಮೊಟ್ಟಮೊದಲ ವಾಟ್ಸ್‌ ಆ್ಯಪ್‌ ಚಾನೆಲ್‌ Chief Minister of Karnataka ಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ್ದು, ಒಂದೇ ವಾರದಲ್ಲಿ 50 ಸಾವಿರಕ್ಕೂ ಅಧಿಕ ಜನ ಚಂದಾದಾರರಾಗಿದ್ದಾರೆ.

ಜನರಿಗೆ ಬೆರಳ ತುದಿಯಲ್ಲಿ ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಒದಗಿಸಿ, ಆಡಳಿತವನ್ನು ಮತ್ತಷ್ಟು ಪಾರದರ್ಶಕವಾಗಿಸಲು ಚಾನೆಲ್‌ ಆರಂಭಿಸಲಾಗಿದೆ.

ಕಳೆದವಾರವಷ್ಟೇ ಅಂದರೆ ಸೆ. 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಾನೆಲ್‌ ಗೆ ಚಾಲನೆ ನೀಡಿದ್ದರು. ಇದಕ್ಕೆ ಈಗಾಗಲೇ 50 ಸಾವಿರಕ್ಕೂ ಅಧಿಕ ಚಂದಾದಾರ (Subscribers)) ಆಗಿದ್ದಾರೆ.

ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸ್‌ ಆ್ಯಪ್‌ ಚಾನಲ್‌ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ನೀವು ಕೂಡ ವಾಟ್ಸ್‌ ಆ್ಯಪ್‌ ನ ಚಾನೆಲ್‌ ಸೆಕ್ಷನ್‌ ನಲ್ಲಿ Chief Minister of Karnataka ಎಂದು ಸರ್ಚ್‌ ಮಾಡಿ ಚಂದಾದಾರರಾಗಬಹುದು.

RELATED ARTICLES
- Advertisment -
Google search engine

Most Popular