Monday, April 21, 2025
Google search engine

Homeರಾಜ್ಯಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 56 ಲಕ್ಷ ಹೆಚ್ಚುವರಿ ಬೆಳೆ ಸಾಲ ವಿತರಿಸಲು ತೀರ್ಮಾನ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 56 ಲಕ್ಷ ಹೆಚ್ಚುವರಿ ಬೆಳೆ ಸಾಲ ವಿತರಿಸಲು ತೀರ್ಮಾನ

ಹೊಸೂರು : ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೨-೨೩ನೇ ಸಾಲಿನಲ್ಲಿ ೮೩೯.೩೪ ಲಕ್ಷ ರೂ ಕೆಸಿಸಿ ಸಾಲ ವಿತರಿಸಿದ್ದು, ಈ ಬಾರಿ ಹೆಚ್ಚುವರಿಯಾಗಿ ೫೬ ಲಕ್ಷ ರೂ ಬೆಳೆ ಸಾಲವನ್ನು ೮೭ ಮಂದಿ ಹೊಸ ಸದಸ್ಯರಿಗೆ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಜಿ.ಆರ್.ಕೃಷ್ಣೇಗೌಡ ಹೇಳಿದರು.

ಕೆ.ಆರ್.ನಗರ ತಾಲೂಕು ಚಿಕ್ಕವಡ್ಡರಗುಡಿ ಗ್ರಾಮದ ಸಂಘದ ಆಡಳಿತ ಕಛೇರಿ ಆವರಣದಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘ ೩.೯೯ ಲಕ್ಷ ನಿವ್ವಳ ಲಾಭಗಳಿಸಿದ್ದು ಇನ್ನಷ್ಟು ಲಾಭ ಗಳಿಸಲು ಮತ್ತು ರೈತರಿಗೆ ಉಪಯುಕ್ತವಾದ ಯೋಜನೆಗಳನ್ನು ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ ಎಂದರು.

ಗಂಧನಹಳ್ಳಿ ಗ್ರಾಮದಲ್ಲಿ ಸಂಘದ ಉಪ ಕಛೇರಿ ಆರಂಭಿಸಲು ಕಳೆದ ಬಾರಿಯ ವಾರ್ಷಿಕ ಸಭೆಯಲ್ಲಿ ತೀರ್ಮಾನಿಸಿ, ಅನುದಾನಕ್ಕಾಗಿ ಜಿಲ್ಲಾ ಬ್ಯಾಂಕ್‌ ಗೆ ಮನವಿ ಸಲ್ಲಿಸಲಾಗಿದೆ ಎಂದ ಅಧ್ಯಕ್ಷರು ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಭರವಸೆ ನೀಡಿದಲ್ಲದೆ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗೊಬ್ಬರ ಮಾರಾಟ ಮಾಡಲು ಕ್ರಮ ವಹಿಸಲಾಗಿದ್ದು ಮಾರ್ಚ್ ವೇಳೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಘಕ್ಕೆ ಕಂಚಿನಕೆರೆ, ಬೊಮ್ಮೇನಹಳ್ಳಿ, ಗಂಧನಹಳ್ಳಿ, ಕಾಕನಹಳ್ಳಿ, ಚಿಕ್ಕವಡ್ಡರಗುಡಿ, ಗಂಧನಹಳ್ಳಿಕೊಪ್ಪಲು ಗ್ರಾಮಗಳು ಸೇರಿದ್ದು, ೧೬೬೬ ಮಂದಿ ಷೇರುದಾರ ಸದಸ್ಯರಿದ್ದಾರೆ. ಒಟ್ಟು ಷೇರು ಬಂಡವಾಳ ೧೧೧.೮೫ ಲಕ್ಷ ರೂಗಳಿದ್ದು, ರೈತರಿಗೆ ಅನುಕೂಲ ನೀಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ೫ ಲಕ್ಷದ ವರೆಗೆ  ಸಾಲ ನೀಡುವ ಯೋಜನೆ ಜಾರಿ ಮಾಡಿರುವುದರಿಂದ ಸಂಘಕ್ಕೆ ಹೆಚ್ಚು ಮಂದಿ ರೈತರನ್ನು ಸದಸ್ಯರನ್ನಾಗಿ ಮಾಡಲು ಶ್ರಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಪುಷ್ಪಲತಾರಮೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಗಂಧನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಆನಂದ್, ಮುಖಂಡರಾದ ಬುಡಿಗೌಡ, ಜಿ.ಆರ್.ಮಹದೇವ್, ಬಸವರಾಜು, ಎಸ್.ರಾಮು, ಸತೀಶ್, ದೇವರಾಜು, ಜಿ.ಡಿ.ಕುಮಾರ್, ಸಾಹಿತಿ ನಾಗರಾಜು ಸೇರಿದಂತೆ ಹಲವು ಸದಸ್ಯರು ಮಾತನಾಡಿ ಸಂಘದ ಅಭಿವೃದ್ದಿಗೆ ಉಪಯುಕ್ತವಾದ ಸಲಹೆ ಸೂಚನೆ ನೀಡಿದರು.

ಉಪಾಧ್ಯಕ್ಷ ಮಹದೇವನಾಯಕ, ನಿರ್ದೇಶಕರಾದ ನಾಗಮ್ಮ, ಕಾಮಾಕ್ಷಮ್ಮ, ನಾರಾಯಣ್, ಕೆಂಪೇಗೌಡ, ಸಿ.ರಮೇಶ್‌ಬಾಬು, ವೀರಭದ್ರಸ್ವಾಮಿ, ರಂಗೇಗೌಡ, ಜಿ.ಜೆ.ಮಹದೇವ್, ನಿಂಗಾಜೋಗಿ, ಪದ್ಮಮ್ಮ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎಂ.ಸತೀಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಭಾಸ್ಕರ್, ಸಿಬ್ಬಂದಿಗಳಾದ ಕೆ.ಎಂ.ಜಯರಾಮು, ಕೆ.ವಿ.ನಂದೀಶ್, ಈಶ್ವರಚಾರ್ ಮತ್ತು ಷೇರುದಾರ ರೈತ ಸದಸ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular