ಶಿವಮೊಗ್ಗ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. ನಗರದ ಜ್ಯೂಯಲ್ ರಾಕ್ ರಸ್ತೆಯಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಸಿಹಿಹಂಚಿ ಸಂತಸ ವ್ಯಕ್ತಪಡಿಸಿದರು. ನಂತರ ಪಟಾಕಿ ಸಿಡಿಸಿದರು.
ಇದರಿಂದ ದೇಶದಲ್ಲಿ ಮಹಿಳೆಯರ ಧ್ವನಿ ಹೆಚ್ಚಾಗಲಿದೆ. ಹಿಂದೆಲ್ಲಾ ಮಹಿಳಾ ಮಸೂದೆಯನ್ನು ಮಂಡಿಸಿದಾಗ ಬೆಂಬಲ ಸಿಗದೆ, ಮಸೂದೆಯು ಜಾರಿಯಾಗಲೇ ಇಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಲೋಕಸಭೆಯಲ್ಲಿ ಮೊದಲ ಬಾರಿಗೆ ಮಂಡಿಸಿದಾಗಲೇ ಅದು ಒಪ್ಪಿಗೆ ಆಗಿ ಈಗ ಚರ್ಚೆಗೆ ಬರುತ್ತಿದೆ. ಇದರಿಂದ ಮಹಿಳೆಯರಿಗೆ ದೇಶದ ಆರ್ಥಿಕ ಪ್ರಗತಿಯಲ್ಲೂ ಭಾಗಿಯಾಗುವ ಅವಕಾಶ ಸಿಕ್ಕಂತಾಗಿದೆ ಎಂದು ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಸಂತೋಷ ವ್ಯಕ್ತಪಡಿಸಿದ್ದಾರೆ.