ಹನೂರು:ಮಳೆ ಇಲ್ಲದೆ ಸಂಕಷ್ಟವನ್ನು ಎದುರಿಸುತ್ತಿರುವಂತಹ ರೈತರಿಗೆ ಆಶಾದಾಯಕವಾಗಿ ಹಾಗೂ ಜೀವನೋಪಾಯಕ್ಕಾಗಿ ಇರುವ ವ್ಯವಸ್ಥೆಯೆ ಹೈನುಗಾರಿಕೆ ಎಂದು ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್ ತಿಳಿಸಿದರು.
ಬುಧವಾರದಂದು ಹನೂರು ತಾಲ್ಲೂಕಿನ ತೋಮಿಯರ್ ಪಾಳ್ಯ ಹಾಗೂ ಮರಿಮಂಗಲ ಗ್ರಾಮದಲ್ಲಿ
ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅನ್ನದಾತರ ಜೀವನೋಪಾಯಕ್ಕಾಗಿ ಹೈನುಗಾರಿಕೆ ಸಹಕಾರಿಯಾಗಿದೆ ಎಂದರಲ್ಲದೆ ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದನೆ ಮಾಡುವಂತಹ ಸಂಘ ಎಂದರೇ ನಮ್ಮ ತಾಲ್ಲೂಕಿನ ತೋಮಿಯರಪಾಳ್ಯ ಸಂಘ ಎನ್ನುವುದೆ ನಮಗೆ ಹೆಮ್ಮೆಯ ವಿಚಾರ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ವೇಳೆ ಚಾಮುಲ್ ನಿರ್ದೇಶಕರಾದ ಶಾಹುಲ್ ಅಹಮದ್ ಮಾತನಾಡಿ ಹಾಲಿನ ಕೊಬ್ಬಿನ ಅಂಶ ಹೆಚ್ಚಾದಷ್ಟು ರೈತರು ಉತ್ತಮ ದರ ಪಡೆಯಬಹುದು. ಖನಿಜ ಮಿಶ್ರಣ, ಗೋಧಾರ ಶಕ್ತಿ ಪುಡಿ, ನೆಕ್ಕು ಬಿಲ್ಲೆ, ಜೋಳದ ನುಚ್ಚು, ಪಶು ಆಹಾರ, ಹಸಿರು ಮೇವಿನ ಜೊತೆ ಹೊಣ ಹುಲ್ಲು ಮುಂತಾದ ಸಮತೋಲನ ಆಹಾರ ನೀಡಿದ್ದಲ್ಲಿ ಹಾಲಿನ ಗುಣ ಮಟ್ಟ ಕಾಪಾಡ ಬಹುದು. ಗುಣ ಮಟ್ಟದ ಹಾಲು ಪೂರೈಕೆಯಿಂದ ಮಾತ್ರ ಡೇರಿ ಮತ್ತು ಲಾಭದಾಯಕವಾಗಿರಲು ಸಾದ್ಯ ಎಂದು ತಿಳಿಸಿದರು. ಈ ವೇಳೆ ಮರಿಮಂಗಲ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಆಯೋಜನೆ ಮಾಡಿದ ಸಭೆಯಲ್ಲೂ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮರಿಮಂಗಲ ಗ್ರಾಮದ ಅಧ್ಯಕ್ಷರಾದ ಜಿ ಸಂದಿಯಾಗು, ತೋಮಿಯರಪಾಳ್ಯ ಅಧ್ಯಕ್ಷ ರಾಜಕಣ್ಣು, ಚಾಮುಲ್ ಜನರಲ್ ಮ್ಯಾನಜರ್ ಶಿವಪ್ರಸಾದ್, ಚಾಮುಲ್ ಉಪವ್ಯವಸ್ಥಾಪಕರಾದ ಶರತ್ ಕುಮಾರ್ , ವಿಸ್ತರಣಾಧಿಕಾರಿ ರಘುರಾಜ್, ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮದಲೈಮುತ್ತು, ಹಾಗೂ ಮರಿಮಂಗಲ ಗ್ರಾಮದ ಸಿಇಒ ಅಲ್ಪ, ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ರೈತರುಗಳು ಭಾಗವಹಿಸಿದ್ದರು.