Sunday, April 20, 2025
Google search engine

Homeರಾಜ್ಯಸುದ್ದಿಜಾಲಕಲೆ-ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅವಿಸ್ಮರಣೀಯ

ಕಲೆ-ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅವಿಸ್ಮರಣೀಯ

ಪಿರಿಯಾಪಟ್ಟಣ: ವಿಶ್ವಕರ್ಮ ಸಮುದಾಯದವರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಜಗತ್ತಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ವಿಶ್ವಕರ್ಮ ಸಮಾಜ ತಾಲ್ಲೂಕು ಕಾರ್ಯದರ್ಶಿ ಹಿರಣ್ಣಯ್ಯ ತಿಳಿಸಿದರು. ತಾಲೂಕಿನ ಬೆಟ್ಟದಪುರ ಸಮೀಪದ ಕೌಲನಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಗೆಳೆಯರ ಬಳಗದ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿ, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟ, ಗೃಹಬಳಕೆ ವಸ್ತು, ಸ್ಮಾರಕಗಳ ನಿರ್ಮಾಣ ಕಾರ್ಯದಲ್ಲಿ ವಿಶ್ವಕರ್ಮ ಜನಾಂಗದ ಕಲೆಗೆ ಸಾಕ್ಷಿಯಾಗಿದೆ, ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಕೊಡುಗೆ ಅಪಾರವಾಗಿದೆ ಆದರೆ ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕುಲಕಸುಬು ಕಳೆದುಕೊಳ್ಳುವ ಭೀತಿಯಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು ಆದ್ದರಿಂದ ಸರ್ಕಾರ ವಿಶ್ವಕರ್ಮ ಸಮುದಾಯವನ್ನು ಹೆಚ್ಚು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿ ಅ.1ರಂದು ಪಿರಿಯಾಪಟ್ಟಣದಲ್ಲಿ ವಿಶ್ವಕರ್ಮ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸಕಲ ಸಿದ್ಧತೆ ನಡೆದಿದೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.

ಈ ವೇಳೆ ಗ್ರಾಮದ ಹಿರಿಯ ಮುಖಂಡರಿಗೆ ಸನ್ಮಾನಿಸಿ ಗೌರವಿಸಲಾಯಿತು, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದಾಚಾರಿ, ಯಜಮಾನರಾದ ಶಂಕರೇಗೌಡ, ಶಿವಣ್ಣ, ಅಣ್ಣೇಗೌಡ, ಪ್ರಜಾಚಾರಿ, ನರಸಿಂಹಾಚಾರಿ, ಸುರೇಶ್, ನಾಗರಾಜಚಾರಿ, ಕುಮಾರಚಾರಿ, ಗಣೇಶ್, ವಸಂತ್ ಹಾಗು ಗ್ರಾಮದ ಯುವಕರು ಮಹಿಳೆಯರು ಇದ್ದರು.


RELATED ARTICLES
- Advertisment -
Google search engine

Most Popular