Saturday, April 19, 2025
Google search engine

Homeರಾಜ್ಯಸರ್ಕಾರಿ ಶಾಲಾ ಕಟ್ಟಡದ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಇಂಜಿನಿಯರ್ ಉಡಾಫೆ ಉತ್ತರ: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಸರ್ಕಾರಿ ಶಾಲಾ ಕಟ್ಟಡದ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಇಂಜಿನಿಯರ್ ಉಡಾಫೆ ಉತ್ತರ: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಮಂಡ್ಯ: ನಿರ್ಮಿತಿ ಕೇಂದ್ರದಿಂದ ಸರ್ಕಾರಿ ಶಾಲಾ ಕಟ್ಟಡದ ಕಳಪೆ ಕಾಮಗಾರಿ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಜಿಲ್ಲಾ ಸಚಿವರನ್ನು ಕೇಳಿ, ಕಾಂಗ್ರೆಸ್ ಕಚೇರಿಗೆ ಹೋಗಿ ಎಂದು ಮಂಡ್ಯದ  ನಿರ್ಮಿತಿ ಕೇಂದ್ರದ ಇಂಜಿನಿಯರ್ ಉಢಾಪೆ ಉತ್ತರ ನೀಡಿರುವ ಘಟನೆ ನಾಗಮಂಗಲದ ತಟ್ಟೀಕೆರೆ ಗ್ರಾಮದಲ್ಲಿ ನಡೆದಿದೆ.

ನಿರ್ಮಿತ ಕೇಂದ್ರದ ಇಂಜಿನಿಯರ್’ನ ಉಡಾಫೆ ಉತ್ತರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏನಿದು ಘಟನೆ ?

ನಾಗಮಂಗಲದ ತಟ್ಟೀಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿತಿ ಕೇಂದ್ರದಿಂದ ದುರಸ್ತಿ ಮಾಡಿಸಲಾಗಿತ್ತು.  ಶಾಲಾ ಕಟ್ಟಡದ ಮೇಲ್ಛಾವಣಿ ಹಾಗೂ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ಈ ಬಗ್ಗೆ ಕಳಪೆ ಕಾಮಗಾರಿಯ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಗ್ರಾಮಸ್ಥರು ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಈ ಕಾಮಗಾರಿ ನಿರ್ವಹಣೆ ಮಾಡಿದ್ದ  ನಿರ್ಮಿತಿ ಕೇಂದ್ರದ ಇಂಜಿನಿಯರ್ ಗೆ ಗ್ರಾಮಸ್ಥರು ದೂರವಾಣಿ ಮೂಲಕ ದೂರು ನೀಡಿದ್ದರು. ಆದರೆ ಇಂಜಿನಿಯರ್ ಗ್ರಾಮಸ್ಥರ ದೂರಿಗೆ ಸಚಿವರನ್ನು ಕೇಳಿ, ಪಾರ್ಟಿ ಆಫೀಸ್ ಗೆ ಹೋಗಿ  ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಸರ್ಕಾರಿ ಅಧಿಕಾರಿಯ ಬೇಜವಬ್ದಾರಿ ಉತ್ತರಕ್ಕೆ ಕೋಪಗೊಂಡ ಗ್ರಾಮಸ್ಥರು ನಾವ್ಯಾಕೆ ಕಾಂಗ್ರೆಸ್ ಕಚೇರಿಗೆ ಹೋಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಕಾಮಗಾರಿ ಮಾಡಿರೋ ಅಧಿಕಾರಿಯ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ  ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular