Saturday, April 19, 2025
Google search engine

Homeರಾಜಕೀಯಸುಪ್ರಿಂ ಕೋರ್ಟ್ ಆದೇಶ:ವಾದ ಮಾಡುವಲ್ಲಿ ಲೋಪ ಕಾಣಿಸುತ್ತಿದೆ-ಸಂಸದೆ ಸುಮಲತಾ ಅಂಬರೀಶ್ ಬೇಸರ

ಸುಪ್ರಿಂ ಕೋರ್ಟ್ ಆದೇಶ:ವಾದ ಮಾಡುವಲ್ಲಿ ಲೋಪ ಕಾಣಿಸುತ್ತಿದೆ-ಸಂಸದೆ ಸುಮಲತಾ ಅಂಬರೀಶ್ ಬೇಸರ

ಮಂಡ್ಯ: ಸುಪ್ರಿಂ ಕೋರ್ಟ್ ರಿಲೀಫ್ ಕೊಡುತ್ತದೆ ಎಂದು ಭಾವಿಸಿದ್ದೇವು. ಆದರೆ ಮತ್ತೆ ನಮಗೆ ಅನ್ಯಾಯ ಆಗಿದೆ. ಸುಪ್ರಿಂ ಕೋರ್ಟ್ ಆದೇಶ ಗೌರವಿಸಬೇಕು, ಪಾಲಿಸಬೇಕು. ಇದನ್ನ ನಾನು ರಾಜಕೀಯವಾಗಿ ಮಾತನಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರು ಮಧ್ಯ ಪ್ರವೇಶಿಸಿದ ಪರಿಸ್ಥಿತಿಯಲ್ಲಿ ಇದ್ದೇವೆ. ಕೇಂದ್ರ ಸಹ ಮಧ್ಯ ಪ್ರವೇಶಿಸಿದ ಪರಿಸ್ಥಿತಿ ಇದೆ. ಅನ್ಯಾಯ ಆಗುವ ರೈತರಿಗೆ ಏನು ಉತ್ತರ ಕೊಡಬೇಕು. ಸುಪ್ರಿಂ ಕೋರ್ಟ್ ಹತ್ತಿರ ಹೋಗಿ ಹೋರಾಟ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಹೇಳುವ ಮಾಹಿತಿ ಕೇಳಿ ಆತಂಕ ಆಗುತ್ತದೆ ಎಂದು ಹೇಳಿದ್ದಾರೆ.

ಕೃಷಿಗೆ ನೀರು ಬಿಡುವ ಪರಿಸ್ಥಿತಿ ಇಲ್ಲ. ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಏನು ಮಾಡಬೇಕು ಎಂದು ಕೇಳಿದ್ದೇನೆ. ಸಿಎಂ ಅವರು ಮೂರು ಸಭೆ ಕರೆದಿದ್ದರು. ಎಲ್ಲ ಸಭೆ ಕೂಡ ಭಾಗಿಯಾಗಿದ್ದೇನೆ. ಯಾತಕ್ಕೆ ಪ್ರತಿಭಾರಿ ಹಿನ್ನಡೆಯಾಗುತ್ತಿದೆ. ವಾದ ಮಾಡುವಲ್ಲಿ ಲೋಪ ಕಾಣಿಸುತ್ತಿದೆ. ಸಿಬ್ಲ್ಯೂಡಿ ಮೀಟಿಂಗ್​ನಲ್ಲಿ ತಮಿಳುನಾಡಿನ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು. ಆದರೆ ನಮ್ಮ ಅಧಿಕಾರಿಗಳು ವಿಡಿಯೋ ಕನ್ಫರೆನ್ಸ್ ಮೂಲಕ ಭಾಗಿಯಾಗಿದ್ದಾರೆ. ಇದರಿಂದ ಏನು ಏಫೆಕ್ಟ್ ಬರಲಿದೆ. ನಮ್ಮ ಪ್ರಯತ್ನ ಮಾಡಬೇಕು. ಗಂಭೀರ ವಿಷಯವನ್ನ ಉಡಾಫೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

16 ಟಿಎಂಸಿಯಲ್ಲಿ ತಮಿಳುನಾಡಿಗೆ ಬಿಟ್ಟು, ಕೃಷಿ ಕುಡಿಯಲು ಬಳಸಬೇಕಿದೆ. 4 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಮಳೆ ಬಂದರೆ ಮಾತ್ರ ಕಷ್ಟ ಬಗೆಹರಿಯಲಿದೆ. ಬೇರೆ ದಾರಿ ಕಾಣುತ್ತಿಲ್ಲ. ದೆಹಲಿಯಲ್ಲಿ ಜಲಶಕ್ತಿ ಸಚಿವರನ್ನ ಭೇಟಿ ಮಾಡಿದ್ದೇನೆ. ಏನಾದರೂ ದಾರಿ ಮಾಡಿಕೊಡಿ ಎಂದು ಕೇಳಿದ್ದೇ. ಒಂದು ಕಮಿಟಿ ಮಾಡಿ ವಾಸ್ತವ ಪರಿಸ್ಥಿತಿ ತಿಳಿಯಲು ಸರ್ವೆ ಮಾಡಿಸುತ್ತೇನೆ ಎಂದಿದ್ದಾರೆ. ನಮಗೆ ಉಳಿದಿರುವ ದಾರಿ ಬೇರೆ ಇಲ್ಲ. ಕುಡಿಯುವ ನೀರಿನ ಅಗತ್ಯ ಬಿಟ್ಟು, ಕೃಷಿಗೆ ನೀರನ್ನ ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು‌ ಹೇಳುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಸರ್ಕಾರ ನಷ್ಟ ಪರಿಹಾರ ಘೋಷಣೆ ಮಾಡಬೇಕು. ಬೆಳೆ ಇನ್ಶೂರೆನ್ಸ್ ಮಾಡಿಸಿಕೊಳ್ಳುವಲ್ಲಿ ರೈತರು ಎಡವಿದ್ದಾರೆ. ನಾಲ್ಕು ವರ್ಷ ಮಳೆ ಬಂದಿತ್ತು. ಯಾರಿಗೂ ಯೋಚನೆ ಬಂದಿರಲಿಲ್ಲ. ಮತ್ತೆ ದೆಹಲಿಗೆ ಹೋಗುತ್ತೇನೆ. ಪರಸ್ಪರ ರಾಜ್ಯಗಳು ಕುಳಿತು ಮಾತನಾಡಬೇಕು. ಗುಡ್ ವಿಲ್ ಬಳಸಿಕೊಂಡು ಮಾತುಕತೆ ನಡೆಸಬೇಕು. ಇಲ್ಲಿನ ಪರಿಸ್ಥಿತಿ ತಿಳಿಸಬೇಕು. ನೀರು ಕೊಡಲು ಆಗಲ್ಲ ಎಂಬುದಲ್ಲ ವಾದ. ನಮ್ಮ ಪರಿಸ್ಥಿತಿ ಏನಿದೆ ಎಂದು ನೋಡಿ ಎಂದು ತಿಳಿಸಬೇಕು. ನಮ್ಮಲ್ಲೂ ತಮಿಳಿಗರು ಇದ್ದಾರೆ ಎಂದರು.

                             

RELATED ARTICLES
- Advertisment -
Google search engine

Most Popular