ಹೊಸೂರು : ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ 5 ವರ್ಷಗಳ ಅವಧಿಯಲ್ಲಿ 275 ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ ವಿವಿಧ ಸಾಲವಾಗಿ 1600 ಕೋಟಿ ಸಾಲವನ್ನು ರೈತರಿಗೆ ವಿತರಿಸಲಾಗಿದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಹೇಳಿದರು
ಸಾಲಿಗ್ರಾಮ ತಾಲೂಕಿನ ಹಾಡ್ಯ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ 15.80 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಮಾಣಿಜ್ಯ ಮಳಿಗೆ ಮತ್ತು ಮಿಟಿಂಗ್ ಹಾಲ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಚ್ಚು ಹೋಗುತ್ತಿದ್ದ ಜಿಲ್ಲಾ ಸಹಕಾರ ಬ್ಯಾಂಕ್ ನಲ್ಲಿ 62 ವರ್ಷದಿಂದ ಇದ್ದ 377 ಕೋಟಿ ಠೇವಣಿ ಹಣವನ್ನು ತಮ್ಮ 5 ವರ್ಷದ ಅವಧಿಯಲ್ಲಿ 950 ಕೋಟಿರೂಗಳಿಗೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಿಂದ ಹೆಚ್ಚಿಸಿ ಬ್ಯಾಂಕ್ ಅನ್ನು ಯಶಸ್ವಿಯಾಗಿ ನಡೆಸಿ ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಮಾಹಿತಿ ನೀಡಿದರು. ನಬಾರ್ಡ್ ನಿಂದ 400 ಕೋಟಿರೂಗಳ ಸಾಲವನ್ನು ತಂದಿದ್ದೇನೆ ಕೆ.ಆರ್.ನಗರ ತಾಲೂಕಿಗೆ ಒಂದಕ್ಕೆ 206 ಕೋಟಿ ರೂಗಳ ಸಾಲವನ್ನು ವಿತರಿಸುವುದರ ಜೊತಗೆ ಇಲ್ಲಿನ ವಿವಿಧ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ 30ಲಕ್ಷಕ್ಕು ಹೆಚ್ಚಿನ ಅನುಧಾನ ನೀಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ರವಿಶಂಕರ್ ಮಾತನಾಡಿ ಸಹಕಾರ ಸಂಘಗಳು ಅಭಿವೃದ್ಧಿ ಆಗಬೇಕಾದರೇ ಇಲ್ಲಿ ಪಡೆದಿರುವ ಸಾಲವನ್ನು ರೈತರು ಸಕಾಲದಲ್ಲಿ ಮರುಪಾವತಿಸಿ ಎಂದು ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದ ವ್ಯಾಪ್ತಿಯ ಸಂಘಗಳ ಕಟ್ಟಡ ನಿರ್ಮಾಣ ನಿರ್ಮಾಣಕ್ಕೆ ಅನುಧಾನ ನೀಡುವುದಾಗಿ ಪ್ರಕಟಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ ಮಾತನಾಡಿ ರೈತರ ಅನುಕೂಲಕ್ಕಾಗಿ 209 ಕೋಟಿರೂಗಳ ವಿವಿಧ ಬೆಳೆ ಸಾಲವನ್ನು ಕೆ.ಆರ್.ನಗರ ತಾಲೂಕಿಗೆ ಸಾಲ ನೀಡಿರುವ ಜಿ.ಡಿ.ಹರೀಶ್ ಗೌಡ ಅವರನ್ನು ಅಭಿನಂದಿಸುವುದರ ಜತಗೆ ಕೆಸ್ತೂರು ಕೊಪ್ಪಲು ಸಹಕಾರ ಸಂಘವನ್ನು ಪುನರ್ ಆರಂಭಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಡಿ.ರವಿಶಂಕರ್ ಮತ್ತು ಜಿ.ಡಿ.ಹರೀಶ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಮ್ಮರಾಜಯ್ಯ ಹಾಡ್ಯ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್,ಉಪಾಧ್ಯಕ್ಷೆ ಮಣಿಲಾ,ಎಚ್.ಡಿ.ವೀರಭದ್ರಪ್ಪ,ಎಚ್.ಸಿ.ರಾಜಶೇಖರಯ್ಯ,ಹನುಮಂತಶೆಟ್ಟಿ,ಎಚ್.ಬಿ.ಪ್ರಕಾಶ್, ಬಸವರಾಜು,ಚಂದ್ರೇಗೌಡ,ಸುಬ್ಬೇಗೌಡ,ಸರೋಜಮ್ಮ,ಚಂದ್ರಶೇಖರಯ್ಯ,ರಾಕೇಶ್, ಮಾಜಿ ಅಧ್ಯಕ್ಷ ತ್ರಿಯಂಬಕ ಸ್ವಾಮಿ, ಮಾಜಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪಾಣಿಮಹೇಶ್, ಸಹಕಾರ ಇಲಾಖೆಯ ಸಿಡಿಓ ಎಸ್.ರವಿ, ಹೊಸೂರು ಎಂಡಿಸಿಸಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಪ್ರತಾಪ್ ಆಯಿರಹಳ್ಳಿ,ಸಂಘದ ಸಿಇಓ ಆನಂತ್, ಹಾಡ್ಯ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎಚ್.ಎಂ.ಶಿವಾನಂದ್, ಕೃಷಿಕ ಸಮಾಜದ ನಿರ್ದೇಶಕ ಹಾಡ್ಯ ನಾಗೇಶ್, ಕಾಂಗ್ರೇಸ್ ಮುಖಂಡರಾದ ಯತೀಶ್, ಬಸವಕಿರಣ್ ಅಂಕನಹಳ್ಳ ಷಣ್ಮುಖ,ಹೊಸೂರು ಡೈರಿ ಮಾದು,ಎಚ್.ಜೆ.ರಮೇಶ್,ಸಿ.ಎಸ್.ಗಿರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಕೆ.ಆರ್.ನಗರ ತಾಲೂಕು ಬರಪೀಡಿತ ತಾಲೂಕು 15 ದಿನದಲ್ಲಿ ಘೋಷಣೆ :ಡಿ.ರವಿಶಂಕರ್
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಶಾಸಕ ಡಿ.ರವಿಶಂಕರ್ ಈಗಾಗಲೇ 190 ತಾಲೂಕು ಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು ಇನ್ನು 15 ದಿನಗಳಲ್ಲಿ ಕೆ.ಆರ್.ನಗರ ತಾಲೂಕು ಅನ್ನು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಲಿದೆ ಎಂದು ಹೇಳಿದರು
ಈಗಾಗಲೇ ಕ್ಷೇತ್ರದ ಸಾಲಿಗ್ರಾಮ ತಾಲೂಕು ಅನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ಕೆ.ಆರ್.ನಗರ ತಾಲೂಕು ಅನ್ನು ಘೋಷಣೆ ಮಾಡಿರಲಿಲ್ಲ ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪರೀಶೀಲನೆ ಮಾಡುವಂತೆ ಸೂಚನೆ ನೀಡಿದ್ದು ಅವರು ನೀಡಿರುವ ವರದಿಯಂತೆ ಘೊಷಣೆ ಆಗಲಿದೆ ಎಂದು ತಿಳಿಸಿದರು
ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗದೇ ಇರುವುದು ಮತ್ತು ಅಣೆಕಟ್ಟೆಗಳಲ್ಲಿ ಹೆಚ್ಚಿನ ನೀರು ಇಲ್ಲದ ಕಾರಣ ಕಡಿಮೆ ನೀರಿನಲ್ಲಿ ಯಾವ ಬೆಳೆಯನ್ನು ಬೆಳೆಯ ಬಹದು ಎಂದು ರೈತರು ಕೃಷಿ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಮಾರ್ಗದರ್ಶನ ಪಡೆದು ಬೆಳೆ ನಷ್ಟದಿಂದ ದೂರವಾಗಿ ಎಂದು ಮನವಿಮಾಡಿದರು.