Saturday, April 19, 2025
Google search engine

Homeರಾಜ್ಯಮಂಡ್ಯ: ಜಲಮಂಡಳಿಗೆ ಕನ್ನಡಪರ ಸಂಘಟನೆಗಳಿಂದ ಮುತ್ತಿಗೆ- ಕಾರ್ಯಕರ್ತರ ಬಂಧನ

ಮಂಡ್ಯ: ಜಲಮಂಡಳಿಗೆ ಕನ್ನಡಪರ ಸಂಘಟನೆಗಳಿಂದ ಮುತ್ತಿಗೆ- ಕಾರ್ಯಕರ್ತರ ಬಂಧನ

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ಬೆಂಗಳೂರು ಜಲಮಂಡಳಿಗೆ ಕನ್ನಡಪರ ಸಂಘಟನೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿವೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲರುವ ಬೆಂಗಳೂರಿಗೆ ನೀರು ಸರಬರಾಜು ಆಗುವ ಜಲಮಂಡಳಿಗೆ ಮುತ್ತಿಗೆ ಹಾಕುವ ಮೂಲಕ ಕಾವೇರಿ ಹೋರಾಟ ಸಮಿತಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ  ಹೊರಹಾಕಿದ್ದಾರೆ.

ಬೆಂಗಳೂರಿನ ಜನರು ಕಾವೇರಿ ನೀರಿನ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಕುಡಿಯಲು ನೀರು ಕೊಡದಿದ್ದರೆ ಅವರು ಬೀದಿಗೆ ಬಂದು ಹೋರಾಟ ಮಾಡ್ತಾರೆ. ಕಾವೇರಿ ನೀರಿನ ಅವಶ್ಯಕತೆ ಎಲ್ಲರಿಗೂ ಇದೆ ಎಲ್ಲರು ಹೋರಾಟಕ್ಕೆ ಬಂದು ರೈತರಿಗೆ ಬೆಂಬಲ ನೀಡಿ. ತಮಿಳುನಾಡಿಗೆ ಹೊಗುತ್ತಿರುವ ನೀರನ್ನ ತಕ್ಷಣವೇ ರಾಜ್ಯ ಸರ್ಕಾರ ನಿಲ್ಲಿಸಿ, ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಬೆಂಗಳೂರು ಜಲಮಂಡಳಿಗೆ ಮುತ್ತಿಗೆ ಹಾಕಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular