Saturday, April 19, 2025
Google search engine

Homeರಾಜ್ಯಸೆ.23 ರಂದು ಶ್ರೀ ರಾಧಾ ಜಯಂತಿ ಆಚರಣೆ

ಸೆ.23 ರಂದು ಶ್ರೀ ರಾಧಾ ಜಯಂತಿ ಆಚರಣೆ

ಚಾಮರಾಜನಗರ: ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಸೆಪ್ಟಂಬರ್ 23ರ ಶನಿವಾರ ಸಂಜೆ 6.30ಕ್ಕೆ ಶ್ರೀ ರಾಧಾ ಜಯಂತಿಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದೆ.

ಶ್ರೀ ರಾಧಾ ಜಯಂತಿ ಅಂಗವಾಗಿ ಶ್ರೀ ರಾಧಾ ವೇಷಭೂಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಥಳದಲ್ಲಿ ನೊಂದಾಯಿಸಿಕೊಳ್ಳಬಹುದು. ಆಗಮಿಸಿದ ಎಲ್ಲರಿಗೂ  ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು.

ಚಾಮರಾಜನಗರದಲ್ಲಿ ಮೊಟ್ಟ ಮೊದಲ ಬಾರಿಗೆ ರಾಧಾ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಶ್ರೀ ರಾಧಾ ಭಜನ್ ಹಾಗೂ ಗೀತ ಗಾಯನ ವೇಷಭೂಷಣ ಸ್ಪರ್ಧೆ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular