Sunday, April 20, 2025
Google search engine

Homeರಾಜ್ಯಸುದ್ದಿಜಾಲಬರಕಾ ವಿದ್ಯಾರ್ಥಿಗಳಿಂದ ಟ್ರಾಫಿಕ್ ಪೊಲೀಸರಿಗೆ ಫುಡ್ ಕಿಟ್ ವಿತರಣೆ: ಸೇವೆಗೆ ಗೌರವ ಅರ್ಪಣೆ

ಬರಕಾ ವಿದ್ಯಾರ್ಥಿಗಳಿಂದ ಟ್ರಾಫಿಕ್ ಪೊಲೀಸರಿಗೆ ಫುಡ್ ಕಿಟ್ ವಿತರಣೆ: ಸೇವೆಗೆ ಗೌರವ ಅರ್ಪಣೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಟ್ರಾಫಿಕ್ ಪೊಲೀಸರಿಗೆ ಗೌರವ, ಕೃತಜ್ಞತೆ ಸೂಚಿಸುವ ಸಂಕೇತವಾಗಿ ಮಂಗಳೂರಿನ ಅಡ್ಯಾರ್ ನಲ್ಲಿರುವ ಬರಕಾ ಇಂಟರ್‌ನ್ಯಾಶನಲ್ ಸ್ಕೂಲ್ & ಕಾಲೇಜಿನ ವಿದ್ಯಾರ್ಥಿಗಳು ಉಪಹಾರದ ಪ್ಯಾಕ್ ಅನ್ನು ನೀಡುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು.

ಎಲ್ಲಾ ಪರಿಸ್ಥಿತಿಗಳಲ್ಲೂ ದಣಿವರಿಯದೆ ಕೆಲಸ ಮಾಡುವ ನಮ್ಮ ಟ್ರಾಫಿಕ್ ಫೋರ್ಸ್, ನಗರವನ್ನು ಶಾಂತಿಯುತವಾಗಿ, ವ್ಯವಸ್ಥಿತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವರ ಈ ಅವಿರತ ಸೇವೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ಹಾಗೂ ಅವರ ಸೇವೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ಈ ಉಪಹಾರ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular