ಪಿರಿಯಾಪಟ್ಟಣ: ಸೆ.25 ರಂದು 2023 – 24ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಎಲ್ಲಾ ಹರಾಜು ಮಾರುಕಟ್ಟೆಗಳಲ್ಲಿ ಚಾಲನೆ ದೊರೆಯಲಿದ್ದು, ಬೆಳೆಗಾರರು ಸಕ್ರಿಯವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಂಬಾಕು ಮಂಡಳಿ ಉಪಾಧ್ಯಕ್ಷರು ಮಾಜಿ ಶಾಸಕರಾದ ಎಚ್.ಸಿ ಬಸವರಾಜ್ ರವರು ತಿಳಿಸಿದ್ದಾರೆ.
ಅಂದಾಜು 17 ಸಾವಿರ ಅನಧಿಕೃತ ತಂಬಾಕು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಶೀಘ್ರದಲ್ಲೇ ಅನಧಿಕೃತ ಬೆಳೆಗಾರರ ತಂಬಾಕನ್ನು ಮಾರಾಟ ಮಾಡಲು ಅವಕಾಶ ನೀಡಬೇಕಾಗಿ ಕೇಂದ್ರದ ವಾಣಿಜ್ಯ ಮಂತ್ರಿಗಳು ಹಾಗೂ ತಂಬಾಕು ಮಂಡಳಿಯನ್ನು ಸದಸ್ಯರಾದ ವಿಕ್ರಂಗೌಡ ಹಾಗೂ ಹೆಚ್.ಆರ್ ದಿನೇಶ್ ಅವರೊಟ್ಟಿಗೆ ಒತ್ತಾಯಿಸುವುದಾಗಿ ತಿಳಿಸಿದ್ದು ತಂಬಾಕು ಮಂಡಳಿಯಲ್ಲಿ ನೋಂದಾವಣೆಗೊಂಡಿರುವ ಎಲ್ಲಾ ಖರೀದಿ ಕಂಪನಿಗಳು ಹರಾಜಿನಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಂಬಾಕಿಗೆ ಉತ್ತಮ ಬೆಲೆ ನೀಡಿ ಖರೀದಿಸುವ ಮೂಲಕ ತಂಬಾಕು ರೈತರ ಹಿತ ಕಾಪಾಡುವಂತೆ ಕೋರಿದ್ದಾರೆ.