ಮೈಸೂರು: ದೇವಸ್ಥಾನದ ಮುಂಭಾಗದಲ್ಲಿ ಹಾಕಿದ್ದ ಚಪ್ಪರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರಿನ ೨ನೇ ಈದ್ಗಾ ಬಡಾವಣೆಯಲ್ಲಿ ನಡೆದಿದೆ.
ಬಸವೇಶ್ವರ ದೇವಸ್ಥಾನದ ಮುಂಭಾಗ ಹಾಕಿದ್ದ ತೆಂಗಿನ ಗರಿಯ ಚಪ್ಪರಕ್ಕೆ ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ಎಸಗಲಾಗಿದೆ. ಕಿಡಿಗೇಡಿಗಳು ಉzಶಪೂರ್ವಕವಾಗಿ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.