ಮಂಡ್ಯ: ತಮಿಳುನಾಡಿಗೆ ಬಿಡುತ್ತಿರುವ ನೀರಿನಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಕೆಆರ್‌ಎಸ್ ಡ್ಯಾಮ್ ನಿಂದ 3838 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ನಿನ್ನೆ 2973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗ್ತಿತ್ತು. ಇಂದು 900 ಕ್ಯೂಸೆಕ್ ನಷ್ಟು ನೀರು ಹೆಚ್ಚಳವಾಗಿದೆ ಮತ್ತು ಕಬಿನಿ ಡ್ಯಾಮ್ ನಿಂದಲೂ ತಮಿಳುನಾಡಿಗೆ ರೂ.ಕ್ಯೂಸೆಕ್ ನಷ್ಟು ನೀರು ಬಿಡುಗಡೆ ಮಾಡಿದ್ದು, ಸದ್ಯಕ್ಕೆ 20.405 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 96.80 ಅಡಿ ನೀರು ಸಂಗ್ರಹವಾಗಿದ್ದು ,ಇಂದು ಡ್ಯಾಂಗೆ 6156 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 6874 ನೀರು ಡ್ಯಾಮ್ ನಿಂದ ಹೊರಹರಿವು ಆಗಿದೆ. ನಾಲೆ ಹಾಗೂ ನದಿಗೆ ಸೇರಿ 6874 ಕ್ಯೂಸೆಕ್ನೀರು ಬಿಡುಗಡೆ ಮಾಡಲಾಗಿದೆ.
ಕೆ.ಆರ್.ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ.
ಗರಿಷ್ಠ ಮಟ್ಟ- 124.80
ಇಂದಿನ ಮಟ್ಟ- 96.80
ಗರಿಷ್ಠ ಸಾಮರ್ಥ್ಯ- 49.542 ಟಿಎಂಸಿ
ಇಂದಿನ ಸಾಮರ್ಥ್ಯ- 20.405 ಟಿಎಂಸಿ
ಒಳಹರಿವು- 6156
ಹೊರಹರಿವು- 6874