ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಕಾವೇರಿ ನದಿ ನೀರಿನ ರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರಿಂದ ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನಿಂದ ಆಗಮಿಸಿ ಕನ್ನಡಪರ ಸಂಘಟನೆಗಳು “ಗೆಲ್ಲುವವರೆಗೂ ಹೋರಾಟ, ಏತಕ್ಕಾಗಿ ಹೋರಾಟ? ನ್ಯಾಯಕ್ಕಾಗಿ ಹೋರಾಟ ಬೇಕೇ ಬೇಕು ನ್ಯಾಯ ಬೇಕು, ಅಯ್ಯಯ್ಯೋ ಅನ್ಯಾಯ, ರಕ್ತ ಕೊಟ್ಟೆವು ಕಾವೇರಿ ನೀರು ಬಿಡೆವು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಉಳಿಸಿ ಉಳಿಸಿ ಕಾವೇರಿ ಉಳಿಸಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.