ಚಾಮರಾಜನಗರ: ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ರಾಧಾ ಜಯಂತಿಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಆಚರಿಸಲಾಯಿತು. ಶ್ರೀ ರಾಧಾ ಜಯಂತಿಯ ಅಂಗವಾಗಿ ಶ್ರೀರಾಧಾ ವೇಷಭೂಷಣ ಸ್ಪರ್ಧೆ, ಗೀತ ಗಾಯನ ಹಾಗೂ ಭಜನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಧಾ ಜಯಂತಿಯ ಉದ್ಘಾಟನೆಯನ್ನು ರಾಮಸಮುದ್ರ ಪೊಲೀಸ್ ಠಾಣಾ ವೃತ ನಿರೀಕ್ಷಕರಾದ ಶ್ರೀಕಾಂತ್ ರವರು ನೆರವೇರಿಸಿ ಸಂಸ್ಕೃತಿ ಪರಂಪರೆಯ ಅಭಿಮಾನವನ್ನು ಬೆಳೆಸುವ ದಿಕ್ಕಿನಲ್ಲಿ ಶ್ರೀಕೃಷ್ಣ ಪ್ರತಿಷ್ಠಾನ ಕಳೆದ 13 ವರ್ಷಗಳಿಂದ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ.
ರಾಧಾ ಜಯಂತಿಯ ಮೂಲಕ ರಾಧಾ ವೇಷಭೂಷಣ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ರಾಧಾಭಕ್ತಿಯನ್ನು ಹಾಗೂ ಶ್ರೇಷ್ಠತೆಯ ಅಂಶವನ್ನು ತಿಳಿಸುವ ಪ್ರಯತ್ನ ಮಾಡಿರುವುದು ಬಹಳ ಉತ್ತಮ ಕಾರ್ಯವೆಂದರು. ಯುವಕರು ಮತ್ತು ಮಕ್ಕಳಲ್ಲಿ ವಿಶ್ವಾಸ ಮತ್ತು ಅಭಿಮಾನದ ಮೂಲಕ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಕುಟುಂಬ ಪ್ರೀತಿ ನೆರೆಹೊರೆಯರವನ್ನು ಗೌರವಿಸುವುದು, ಗುರು ಹಿರಿಯರಿಗೆ ಭಕ್ತಿ ಗುಣಗಳು ಬೆಳೆಸುವ ಮೂಲಕ ನಮ್ಮ ಆಧ್ಯಾತ್ಮಿಕತೆಯನ್ನು ತಿಳಿಸುವ ಕಾರ್ಯವನ್ನು ಮಾಡುವ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕಾಗಿದೆ ಎಂದರು.
ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ರಾಧಾ ಜಯಂತಿಯ ಬಗ್ಗೆ ಮಾತನಾಡಿ ಮೊಟ್ಟಮೊದಲ ಬಾರಿಗೆ ರಾಧಾ ಜಯಂತಿಯನ್ನು ಚಾಮರಾಜನಗರದಲ್ಲಿ ಆಚರಿಸುವ ಸಂಪ್ರದಾಯವನ್ನು ರೂಢಿಗೆ ತಂದಿದ್ದು , ಕೃಷ್ಣನ ಶಕ್ತಿಯ ಮೂಲ ರಾಧೆಯಾಗಿದ್ದು ,ರಾಧೆ ಸರ್ವ ವ್ಯಾಪಿ, ಸರ್ವಮಯಿ ಹಾಗೂ ಕೃಷ್ಣಮಯಿ ಆಗಿದ್ದಾರೆ . ಭಕ್ತಿ ಮತ್ತು ಪ್ರೇಮದ ಶ್ರೇಷ್ಠತ್ವದ ಸಂಕೇತವಾಗಿರುವ ರಾಧೆ ವಿಶ್ವವ್ಯಾಪಿ. ಸರ್ವ ಲಕ್ಷ್ಮಿ,ವಿಶ್ವ ರಕ್ಷಕೀ ಎಲ್ಲ ದೇವತೆಗಳ ಪರಮದೇವತೆಯೆಂದು ತಿಳಿಸಿದರು.
ರಾಧಾಕೃಷ್ಣ ರ ಪ್ರೀತಿ ಅನನ್ಯ ಹಾಗೂ ಪರಮ ಪವಿತ್ರವಾದದ್ದು ರಾಧಾರಾಣಿಯ ಅನುಗ್ರಹವಿಲ್ಲದೆ ಏನು ನಡೆಯದು . ಜೀವಿಗಳನ್ನು ಭಕ್ತರನ್ನು ರಕ್ಷಿಸುವವಳು ರಾಧೆಯ ಮೂಲಕ ಕೃಷ್ಣನ ಸೇವೆಯನ್ನು ಮಾಡೋಣ ಎಲ್ಲಾ ಸಂಕಷ್ಟಗಳಿಂದ ದೂರವಾಗಲು ನಾಮ ಜಪ ಒಂದೇ ದಾರಿಯಾಗಿದೆ ಎಂದರು.
ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿಣಿ ಬಿಕೆ ದಾನೇಶ್ವರಿ ರವರು ವಹಿಸಿ ಮಾತನಾಡುತ್ತಾ ರಾಧಾ ಜಯಂತಿಯ ಮೂಲಕ ಸದ್ಭಾವನೆ ಹಾಗೂ ಸದ್ಯ ಚಿಂತನೆಯ ಗುಣವನ್ನು ಹಾಗೂ ಒಂದು ಹೊಸ ಪರಂಪರೆಯನ್ನು ರೂಪಿಸಿರುವ ಶ್ರೀ ಕೃಷ್ಣ ಪ್ರತಿಷ್ಠಾನ ಉತ್ತಮ ಕಾರ್ಯವನ್ನು ಮಾಡುತ್ತಿದೆ.
ಕೃಷ್ಣನ ಆನಂದದ ಸ್ಥಿತಿಯನ್ನು ಕಾಣುವುದು ಸರಳ ಸೇವೆ ಮೂಲಕ . ಐಶ್ವರ್ಯ ಭಾವವನ್ನು ಬಿಟ್ಟು ಭಕ್ತಿ ಮಾರ್ಗದ ಮೂಲಕ ನಮ್ಮ ಒಳಗಿನ ಆನಂದದ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಬೇಕು. ರಾಧೆ ಸ್ತ್ರೀ ಸಂಕೇತ. ರಾಧಾಭಕ್ತಿ ಮತ್ತು ಪ್ರೇಮ ಮಾದರಿಯಾದದು. ತಾಯಿ ಸ್ವರೂಪವಾದ ರಾಧೆಯ ಗುಣಗಾನ , ಕೃಷ್ಣ ಭಕ್ತಿ ಹಾಗೂ ಸಮಸ್ತ ಬ್ರಹ್ಮಾಂಡವನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಕೃಷ್ಣನಿಗೆ ಸರ್ವಶಕ್ತಿಯಾಗಿದ್ದವಳು, ರಾಧೆ ಎಂದು ತಿಳಿಸಿದರು. ಬೃಂದಾವನ ಮತ್ತು ಪರಸಾನದಲ್ಲಿ ಲಕ್ಷ ಲಕ್ಷ ಜನ ರಾಧೆಯ ಗುಣಗಾನವನ್ನು ಮಾಡುವರು. ಮೋಹನ ತರಂಗಣಿಯ ಮೂಲಕವೇ ಗೋಪಿಕಾ ಸ್ತ್ರೀಯರು ಪರಮ ಸಂತೋಷಕ್ಕೆ ಒಳಗಾಗುವರು ಅಂತಹ ಶಕ್ತಿ ಶ್ರೀ ಕೃಷ್ಣನಿಗೆ ಇತ್ತು, ಶ್ರೀ ಕೃಷ್ಣ ಆನಂದದ ಸಾಗರ ವೆಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ಜನಪದ ಸುರೇಶ್ ನಾಗ್ ರವರು ರಾಧಾಕೃಷ್ಣ ಗೀತೆಗಳು ಹಾಡಿ ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಸಿದ್ದರಾಜು ಬ್ಯಾಂಗಲ್ಸ್ ನ ಮಾಲೀಕರಾದ ಶ್ರೀಮತಿ ಗೌರಿ ರಾಮಕೃಷ್ಣ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ, ಬಿಕೆ ಆರಾಧ್ಯ, ಸರಳಕ್ಕ, ನಾರಾಯಣಶೆಟ್ಟಿ ,ಸತೀಶ್ ಶಿವಕುಮಾರ್, ಕುಸುಮ ಋಗ್ವೇದಿ, ಪ್ರಮೀಳಾ ಹಾಗೂ ರಾಧೆಯ ವೇಷ ಧರಿಸಿದ ಮಕ್ಕಳು ಉಪಸ್ಥಿತರಿದ್ದರು.
ಎಲ್ಲಾ ರಾಧಾ ವೇಷಧಾರಿ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.