Monday, April 21, 2025
Google search engine

Homeರಾಜ್ಯಸುದ್ದಿಜಾಲನಿಸರ್ಗ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನೆ

ನಿಸರ್ಗ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನೆ

ಕೆ.ಆರ್.ನಗರ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಸಾಧ್ಯವಾಗದಂತಹಾ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸೊಸೈಟಿ ಜನರ ಮೆಚ್ಚುಗೆ ಪಡೆಯಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ೭ನೇ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ನಿಸರ್ಗ ಕ್ರಿಡಿಟ್ ಕೋ-ಅಪರೇಟಿವ್ ಸೊಸೈಟಿ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಕಷ್ಟ ಸಾಧ್ಯ ಇದನ್ನು ಆಡಳಿತ ಮಂಡಳಿಯವರು ಮನಗಂಡು ಸ್ಥಳೀಯರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ನಿರ್ದೇಶಕರುಗಳು ಸಾಲ ಕೊಡಿಸಲು ಪೈಪೋಟಿಗೆ ಬಿದ್ದು ಸಂಘ ಹಾಳು ಮಾಡುವ ಪರಿಸ್ಥಿತಿಗೆ ಬರಬಾರದು ಸಂಘವನ್ನು ಆರ್ಥಿಕವಾಗಿ ಸದೃಡಗೊಳಿಸಲು ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಪರಸ್ಪರ ಹೊಂದಾಣಿಕೆಯಿ0ದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಶಾಸಕರು ಸಾಲ ಕೇಳಲು ಬಂದವರ ಜೊತೆ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಸಹಕಾರ ಸಂಘಗಳಿ0ದ ಜನತೆ ಸುಲಭವಾಗಿ ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ವಿಎಸ್‌ಎಸ್‌ಎನ್ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ನಗರ ಪ್ರಾದೇಶದಲ್ಲಿ ಸಂಘಗಳು ಬಲಿಷ್ಠಗೊಳ್ಳಬೇಕು ಅದಕ್ಕಾಗಿ ಆಡಳಿತ ಮಂಡಳಿಯವರು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪಡೆಯುತ್ತಿರುವ ಸಾಲಕ್ಕೆ ಶೇ.೨೬ರಷ್ಟು ಬಡ್ಡಿ ಕಟ್ಟುತ್ತಿದ್ದಾರೆ ಆದರೂ ಮಹಿಳೆಯರು ಕೋಟ್ಯಾಂತರ ರೂ ಸಾಲವನ್ನು ಆ ಸಂಸ್ಥೆಯಿ0ದ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ ಎಚ್.ವಿಶ್ವನಾಥ್ ಈ ಬಗ್ಗೆ ಮಹಿಳಾ ಸಂಘದ ಸದಸ್ಯರಿಗೆ ತಿಳಿ ಹೇಳಿ ಅವರುಗಳಿಗೆ ತಾವು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು ಇದರಿಂದ ಸೋಸೈಟಿಗೆ ಲಾಭವಾಗುವುದರ ಜತೆಗೆ ಮಹಿಳಾ ಸಂಘದ ಸದಸ್ಯರಿಗೂ ಅನುಕೂಲವಾಗಿದೆ ಎಂದು ಹೇಳಿದರು.
ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿ ಠೇವಣಿ ಹೂಡಿಕೆದಾರರಿಗೆ ಸಂಸ್ಥೆಯ ಮೇಲೆ ನಂಬಿಕೆ ಬರುವ ರೀತಿ ವಹಿವಾಟು ನಡೆಸಬೇಕು, ಸಾಲ ವಸೂಲಾತಿ ಮಾಡುವುದು ಬಹಳ ಕಷ್ಟಕರವಾದ ಕೆಲಸವಾಗಿದೆ ಆದ್ದರಿಂದ ಸ್ಥಳೀಯರಿಗೆ ಮಾತ್ರ ಸಾಲ ಸೌಲಭ್ಯ ನೀಡಬೇಕು ಎಂದು ಸಲಹೆ ನೀಡಿದ ಅಧ್ಯಕ್ಷರು ಉತ್ತಮವಾದ ವಕೀಲರನ್ನ ನೇಮಕ ಮಾಡಿಕೊಳ್ಳಬೇಕು ಎಂದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಸೋಸೈಟಿಯ ನಿರ್ದೇಶಕರಾದ ರವಿಕುಮಾರ್, ಕೃಷ್ಣಮೂರ್ತಿ, ಸಿ.ಎಂ.ರವಿ, ನೇತ್ರಾವತಿ, ಶಿಲ್ಪರಾಜು, ಎಂ.ಆರ್.ಹರೀಶ್, ಮಣಿಕಂಠ, ಜಿ.ನಾಗರಾಜು,
ಮಹದೇವಯ್ಯ, ಎಂ.ನಾಗಪ್ಪ, ಶ್ರೀನಿವಾಸ್, ಮಂಜುನಾಥ್, ಜಯಶಂಕರ್, ಚಂದ್ರಶೇಖರ್, ಚಿಕ್ಕವೀರು, ಪುರಸಭೆ ಮಾಜಿ ಉಪಾಧ್ಯಕ್ಷ ನಾಗರತ್ನಮ್ಮ, ಸದಸ್ಯೆ ಮಂಜುಳಚಿಕ್ಕವೀರು, ಮುಖಂಡರಾದ ರಕ್ಷಿತ್, ಹೇಮಂತ್, ವೆಂಕಟೇಶ್, ನಾಗೇಗೌಡ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular