Monday, April 21, 2025
Google search engine

Homeಸ್ಥಳೀಯಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾಗೃತಿ ಮೂಡಿಸುವ ಅಭಿಯಾನ

ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾಗೃತಿ ಮೂಡಿಸುವ ಅಭಿಯಾನ

ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ(ರಿ) ಸಹಭಾಗಿತ್ವದಲ್ಲಿ ಮೈಸೂರಿನ ಶ್ರೀರಾಂಪುರ ರಿಂಗ್ ರಸ್ತೆಯ ಅಕ್ಕ ಪಕ್ಕ ಸ್ವಚ್ಛತೆ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾಗೃತಿ ಮೂಡಿಸುವ ಅಭಿಯಾನ ಮಾಡಲಾಯಿತು.

ಇಂಡಿಯನ್ ಸ್ವಚ್ಚತಾ ಲೀಗ್ ಸೀಸನ್ 2 ರ ಅಂಗವಾಗಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಯು ಸ್ವಚ್ಛತಾ ಸೇವಾಕಾರ್ಯಗಳನ್ನು ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಜಾಗೃತಿ ಅಭಿಯಾನವನ್ನು ಹಮ್ಮಿ ಕೊಂಡಿದೆ.

ಇದರ ಪ್ರಯುಕ್ತ ಇಂದು ಶ್ರೀರಾಂಪುರ ರಿಂಗ್ ರಸ್ತೆಯ ಸಿಗ್ನಲ್ ಲೈಟ್ ಹತ್ತಿರ ಸ್ವಚ್ಛತಾ ಸೇವಾ ಕಾರ್ಯ ಹಾಗೂ ರಸ್ತೆ ಬದಿಯ ವ್ಯಾಪಾರಿಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ವಹಿವಾಟು ನಿಷೇಧ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ರಿಂಗ್ ರಸ್ತೆಯು ಮೈಸೂರಿನ ಅತ್ಯಂತ ಸುಂದರ ಹಾಗೂ ವಿಶಾಲವಾದ ರಸ್ತೆಯಾಗಿದೆ. ಸಾರ್ವಜನಿಕರು ಈ ರಸ್ತೆಯನ್ನು ಅತಿ ಹೆಚ್ಚು ಬಳಸುತ್ತಿದ್ದು, ಈ ರಸ್ತೆಯು ಮೈಸೂರನ್ನು ವಿವಿಧ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯೂ ಆಗಿದೆ. ವಾಹನ ಸವಾರರು ಈ ರಸ್ತೆಯನ್ನು ಬೆಳೆಸುವಾಗ ತಾವು ತಿಂದ ನಂತರ ಉಳಿದ Lays packet , Kurkure packet, water bottle, tissue paper ಸೇರಿದಂತೆ ಹಲವಾರು ತ್ಯಾಜ್ಯ ವಸ್ತುಗಳನ್ನು ರಸ್ತೆಗೆ ಎಸೆದು ಮುಂದೆ ಹೋಗುತ್ತಿದ್ದಾರೆ ಇದರ ಜೊತೆಗೆ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರ ಮಾಡುವವರು ರಿಂಗ್ ರಸ್ತೆಯ ಹತ್ತಿರ ಕಸಗಳನ್ನು ಸುರಿಯುವುದು ಸಾಮಾನ್ಯ ಆಗಿದೆ. ಇದರಿಂದ ನೈರ್ಮಲ್ಯ ಮೂಡುವುದಲ್ಲದೆ ರಿಂಗ್ ರಸ್ತೆಯಲ್ಲಿ ಮಳೆ‌ ನೀರು ಹೋಗಲು ಮಾಡಿರುವ ಜಾಗಗಳು ಮುಚ್ಚಿ ಮಳೆ‌ಬಂದರೆ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಇದನ್ನು ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಸ್ವಚ್ಚತೆ ಮಾಡುತ್ತಾರೆ ಸಾರ್ವಜನಿಕರಾದ ನಾವು ಗಾರ್ಬೇಜ್ ಜೆನೆರೆಟರ್ ಆಗದೆ ಸ್ವಚ್ಚತಾ ಪ್ರಮೋಟರ್ ಆಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಎಂ,‌ ಆರೋಗ್ಯಾಧಿಕಾರಿ ಪರಮೇಶ್ವರ್, ಕೇಂದ್ರ ರೇಷ್ಮೆ ಮಂಡಳಿಯ ರಮೇಶ್ , ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು, ವಿಶ್ವವಿದ್ಯಾನಿಲಯ ಬಡಾವಣೆ ನಿವಾಸಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular