Sunday, April 20, 2025
Google search engine

Homeಕ್ರೀಡೆಏಷ್ಯನ್‌ ಗೇಮ್ಸ್‌: 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡ

ಏಷ್ಯನ್‌ ಗೇಮ್ಸ್‌: 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ ತಂಡ

ಹ್ಯಾಂಗ್‌ ಝೂ: ಏಷ್ಯನ್‌ ಗೇಮ್ಸ್‌ ನಲ್ಲಿ 25 ಮೀ. ಸ್ಪರ್ಧೆಯಲ್ಲಿ ಭಾರತದ ಮಹಿಳೆಯರ ಪಿಸ್ತೂಲ್ ತಂಡ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ.

ಬುಧವಾರ(ಸೆ.27 ರಂದು) ನಡೆದ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್, ಎಸ್ ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ಭಾರತದ ಏಷ್ಯನ್‌ ಗೇಮ್ಸ್‌ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ.

ಭಾರತ  ಒಟ್ಟು 1759 ಅಂಕಗಳನ್ನು ಗಳಿಸುವ ಮೂಲಕ ಪ್ರಬಲ ಸ್ಪರ್ಧಿ ಚೀನಾಕ್ಕೆ ಆಘಾತವನ್ನೀಡಿದೆ. ಬೆಳ್ಳಪಡೆದುಕೊಂಡ ಚೀನಾ ಒಟ್ಟು 1756 ಅಂಕಗಳನ್ನು ಗಳಿಸಿತು. ಇನ್ನು ರಿಪ್ಲಬಿಕ್‌ ಆಫ್‌ ಕೊರಿಯಾ 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಇನ್ನು ಅರ್ಹತಾ ಸುತ್ತಿನಲ್ಲೂ ಭಾರತದ ಶೂಟರ್‌ ಗಳು ಅದ್ಭುತ ಪ್ರದರ್ಶನ ನೀಡಿದ್ದರು. ಮನು ಭಾಕರ್‌ ಅವರು 590 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರು. ಇಶಾ ಅವರು 586 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ರಿದಮ್ ಸಾಂಗ್ವಾನ್ ಅವರು 583 ಅಂಕಗಳಿಸಿದ್ದರು.

ಇದಕ್ಕೂ ಮುನ್ನ ನಡೆದ 50 ಮೀಟರ್ ರೈಫಲ್ 3 ಪೊಸಿಷನ್ಸ್ ಮಹಿಳಾ ತಂಡ ವಿಭಾಗದಲ್ಲಿ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಏಷನ್ಸ್‌ ಗೇಮ್ಸ್‌ ನಲ್ಲಿ ಭಾರತ ಇದುವರೆಗೆ 16 ಪದಕಗಳನ್ನು ಗಳಿಸಿದ್ದು, ಇದರಲ್ಲಿ 4 ಚಿನ್ನ, 5 ಬೆಳ್ಳಿ ಹಾಗೂ 7 ಕಂಚಿನ ಪದಕಗಳು ಸೇರಿವೆ.

RELATED ARTICLES
- Advertisment -
Google search engine

Most Popular