Monday, April 21, 2025
Google search engine

Homeರಾಜ್ಯರಾಮನಗರ: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

ರಾಮನಗರ: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

ರಾಮನಗರ: ಹಾಲು ಉತ್ಪಾದಕ ಸಂಘದ ಚುನಾವಣೆ ನಡೆಸಲು ಬರುತ್ತಿದ್ದ ಚುನಾವಣಾಧಿಕಾರಿಗಳ ಕಾರನ್ನು ತಡೆದು ದುಷ್ಕರ್ಮಿಗಳು ದಾಖಲೆಗಳನ್ನು ದೋಚಿದ ಘಟನೆ ಹೊಸಪಾಳ್ಯ ಹಾಗೂ ಕೆಂಚನಹಳ್ಳಿಯಲ್ಲಿ ಬುಧವಾರ ನಡೆದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಂಘದ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅದರಂತೆ ಇಂದು ಅಧಿಕಾರಿಗಳು ಕಾರಿನಲ್ಲಿ ಬರುತ್ತಿದ್ದ ವೇಳೆ ಚುನಾವಣಾಧಿಕಾರಿಗಳ ಕಾರನ್ನು ಹೊಸಪಾಳ್ಯ ಹಾಗೂ ಕೆಂಚನಹಳ್ಳಿ ರಸ್ತೆ ಮಧ್ಯದಲ್ಲೇ ಅಡ್ಡಕಟ್ಟಿದ ತಂಡ ಚುನಾವಣಾಧಿಕಾರಿಗಳ ಬಳಿ ಇದ್ದ ಮೊಬೈಲ್ ಹಾಗೂ ಚುನಾವಣೆಗೆ ಸಂಬಂಧಪಟ್ಟ ನಾಮಪತ್ರ ಲ್ಯಾಪ್ ಟ್ಯಾಪ್ ಹಾಗೂ ಇತರೆ ದಾಖಲೆಗಳನ್ನು ಕಸಿದು ಕಾರಿನಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.

ಕುದೂರು ಹಾಗೂ ಮಾಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

RELATED ARTICLES
- Advertisment -
Google search engine

Most Popular