ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಪಂಪ್ ವೆಲ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿರೋ ಮಹಿಳೆಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಶ್ವಿತಾ, ಹಲ್ಲೆಗೊಳಗಾದ ಮಹಿಳೆ.
ಈ ಮಹಿಳೆ ಮಂಗಳೂರು ನಗರದ ಪಂಪವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕಸ್ಟಮರ್ ಕೇರ್ ಎಗ್ಸಿಕ್ಯೂಟಿವ್ ಆಗಿದ್ದಾರೆ. ದಿನಾಂಕ 25-09-2023 ರಂದು ಇವರು ಆಸ್ಪತ್ರೆಯ ಎಡ್ಮಿಷನ್ ಡೆಸ್ಕ್ ನಲ್ಲಿ ಕರ್ತವ್ಯದಲ್ಲಿದ್ದರು.
ಆವಾಗ ಸಮಯ ಮಧ್ಯಾಹ್ನ 2:45 ಗಂಟೆ ಸುಮಾರಿಗೆ ಆರೋಪಿ ಆಶಿಕ್ ಎಂಬುವವರು, ಅವರ ತಾಯಿಯನ್ನು ಒಳ-ರೋಗಿಯಾಗಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ಆ ಸಮಯ ಪಿರ್ಯಾದಿದಾರರು ರೋಗಿಯ ದಾಖಲಾತಿ ಬಗ್ಗೆ ವೈಯಕ್ತಿಕ ಮಾಹಿತಿಯಾದ ಹೆಸರು ಪ್ರಾಯ, ವಿಳಾಸ ಇತ್ಯಾದಿ ಕೇಳಿದಾಗ, ರೋಗಿಯ ಜೊತೆಯಲ್ಲಿದ್ದ ಆರೋಪಿತ ಆಶೀಕ್ ನು ಕೋಪಗೊಂಡು ಆಸ್ಪತ್ರೆ ಸಿಬ್ಬಂದಿಯನ್ನು ತೀರಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಡ್ಮಿಷನ್ ಡೆಸ್ಕ್ ನಲ್ಲಿದ್ದ ಆಸ್ಪತ್ರೆಯ ಬಾಬ್ತು ಸೊತ್ತುಗಳನ್ನು ಹಾನಿಗೊಳಿಸಿದ್ದಾರೆ.
ಅಲ್ಲದೇ ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಅವರ ಎದೆಗೆ ಹಾಗೂ ಭುಜಕ್ಕೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು.