Monday, April 21, 2025
Google search engine

HomeUncategorizedಮಡಿಕೇರಿ: ಕಾಡಾನೆ ದಾಳಿ- ವೃದ್ಧನಿಗೆ ಗಂಭೀರ ಗಾಯ

ಮಡಿಕೇರಿ: ಕಾಡಾನೆ ದಾಳಿ- ವೃದ್ಧನಿಗೆ ಗಂಭೀರ ಗಾಯ


ಮಡಿಕೇರಿ: ವೀರಾಜಪೇಟೆ ಹೊರವಲಯದ ಕಡಂಗ ಮರೂರು ಭದ್ರಕಾಳಿ ದೇವಾಲಯದ ಬಳಿ ಕಾಡಾನೆ ದಾಳಿಯಿಂದ ಅಮ್ಮಂಡ ಸುಬ್ರಮಣಿ (75) ಅವರು ಗಂಭೀರ ವಾಗಿ ಗಾಯಗೊಂಡಿದ್ದಾರೆ.

ಬುಧವಾರ ಬೆಳಗ್ಗೆ ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ಗಾಯಗೊಂಡ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆನೆಗಳನ್ನು ಕಾಡಿಗಟ್ಟಲು ತತ್ಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular