ಮಂಡ್ಯ: ನೀರು ಕೊಡಿ ಅಂದ್ರೆ ಬೀರು ಕೊಡ್ತಿನಿ ಅಂತಾರೆ ಇದು ಸರ್ಕಾರದ ದುರಂತ. ಸುಗ್ರೀವಾಜ್ಞೆ ಹೊರಡಿಸಿದ್ರೆ ಸಿದ್ದರಾಮಯ್ಯ ಇತಿಹಾಸ ಪುರುಷ ಆಗ್ತಾರೆ. ಕೆರೆ ಅಭಿವೃದ್ಧಿಯಿಂದ ಮಾತ್ರ ಕಾವೇರಿ ಉಳಿವು ಸಾಧ್ಯ ಎಂದು ಮಂಡ್ಯದಲ್ಲಿ ಇತಿಹಾಸಕಾರ ಚಿಕ್ಕರಂಗೇಗೌಡ್ರು ಹೇಳಿದರು.
ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ, ಕಾವೇರಿ ಸಮಸ್ಯೆ ಪ್ರಾರಂಭವಾಗಿದ್ದೆ ತಮಿಳುನಾಡಿನ ಚೋಳರಿಂದ. ಹರಿಯುವ ನೀರಿಗೆ ಅಣೆಕಟ್ಟು ಕಟ್ಟಿದ್ದು ತಮಿಳುನಾಡಿನವರು. ಮೊದಲ ಬಾರಿ ಮಂಡ್ಯದಲ್ಲಿ ಅಣೆಕಟ್ಟು ಕಟ್ಟಿದ್ದಾರೆ. ಕಾವೇರಿ ಕನ್ನಡಿಗರದು ಅನ್ನೋದನ್ನ ತಲಕಾಡು ಗಂಗರು ನಿರೂಪಿಸಿದ್ದಾರೆ. ಕಾವೇರಿ ನೀರು ಕರ್ನಾಟಕದಲ್ಲಿ ಇದ್ರೆ ಎಲ್ಲಾ ವರ್ಗದ ಜನರಿಗೆ ಅನುಕೂಲ. ಕಾವೇರಿ ನೀರು ತಮಿಳುನಾಡಿಗೆ ಹೋದ್ರೆ ಅಲ್ಲಿ ಎಲ್ಲ ಉಳ್ಳವರ ಪಾಲಗುತ್ತೆ. ಮಂಡ್ಯ ವ್ಯಾಪ್ತಿಯಲ್ಲಿ ಜಮೀನು ಹೆಚ್ಚಿದೆ ಬಡ ಜನರಿಗೆ ಉಪಯೋಗವಾಗಲಿದೆ ಎಂದರು.
ಮುಖ್ಯಮಂತ್ರಿಗಳು ಗಮನದಲ್ಲಿಟ್ಟುಕೊಂಡು ಬಂಗಾರಪ್ಪ ಅವರ ತರ ಸುಗ್ರೀವಾಜ್ಞೆ ಹೊರಡಿಸಬೇಕು. ಜೈಲಿಗೆ ಹಾಕಿದ್ರು ಪರವಾಗಿಲ್ಲ ಕಾವೇರಿ ನೀರನ್ನ ತಮಿಳುನಾಡಿಗೆ ಬಿಡಲ್ಲ ಅಂದ್ರೆ ಇತಿಹಾಸ ಪುರುಷ ಹಾಗ್ತಾರೆ. ಸಿದ್ದರಾಮಯ್ಯ ತಕ್ಷಣವೇ ಒಂದು ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ಎಸ್ಎಂ ಕೃಷ್ಣ ಅವರ ಕಾಲದಲ್ಲಿ ಕೆರೆ ಊಳು ಎತ್ತುವ ಕಾರ್ಯ ಹಮ್ಮಿಕೊಂಡಿದ್ರು. ಜಯಲಲಿತಾ ತಡೆಯಿಂದ ಅ ಯೋಜನೆ ನಿಲ್ಲಿಸಿದ್ರು ಎಂದು ತಿಳಿಸಿದರು.
ನಮ್ಮಲ್ಲಿ ಇರುವ ಕೆರೆ ಅಭಿವೃದ್ಧಿ ಪಡಿಸಬೇಕು. ಕೆರೆ ಅಭಿವೃದ್ಧಿಯಿಂದ ಕಾವೇರಿ ಉಳಿಸಿಕೊಳ್ಳಬೇಕು. ಡ್ಯಾಂ ಗಳಲ್ಲಿ ನೀರು ಇಟ್ಟಿಕೊಂಡರೆ ಉಪಯೋಗ ಇಲ್ಲ. ಡ್ಯಾಂ ನಲ್ಲಿ ನೀರು ಇದ್ರೆ ನೀರು ಬಿಡಿ ಅಂತಾರೆ. ಕೆರೆ ಕಾನ್ಸೆಪ್ಟ್ ತಂದ್ರೆ ಕಾವೇರಿ ಉಳಿಯುತ್ತೆ. ನ್ಯಾಯಾಲಯದಲ್ಲಿ ಕರ್ನಾಟಕ ಗೆಲ್ಲಲ್ಲು ಸಾಧ್ಯವಿಲ್ಲ. ಕರ್ನಾಟಕದ ಪರ ಕಾವೇರಿ ನೀರಿನ ಪರ ವಾದ ಮಾಡುವ ಲಾಯರ್ ಇಲ್ಲ. ಪರ ಭಾಷೆಯವರನ್ನ ಅವಲಂಬಿಸಬೇಕು. ಕಾವೇರಿ ವಿಚಾರದಲ್ಲಿ ನ್ಯಾಯ ಸಿಗಲ್ಲ. ನಿಯಂತ್ರಣ ಮಂಡಳಿಯ ಪರಿಣತರಿಗೆ ಜಲ ಮಂಡಳಿ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.
ತಮಿಳುನಾಡು ಕಾವೇರಿ ಜಲಾನಯ ಅಭಿವೃದ್ಧಿ ಪಡಿಸಲು ಕಾಣಿಕೆ ಕೊಡಬೇಕು. ದುರಂತ ನಮ್ಮ ಸರ್ಕಾರ ನೀರು ಕೊಡಿ ಅಂದ್ರೆ ಬೀರು ಕೊಡ್ತಿನಿ ಅಂತಾರೆ. ರಾಜಕಾರಣಿಗಳಲ್ಲಿ ಇಚ್ಚಾಶಕ್ತಿ ಇಲ್ಲ. ಬೆಂಗಳೂರು ಬಂದ್ ಮಾಡಿ ಯಶಸ್ವಿಯಾಗಿ ನಡೆಯಿತು. ಕೆರೆ ಹೂಳೆತ್ತುವ ಕಾರ್ಯ ಮಾಡ್ತೇವೆ. ನಾಳಿನ ಬಂದ್ ಗೆ ನಮ್ಮ ಬೆಂಬಲ ಇದೆ ಎಂದರು.
ನಮಗೆ ವಾಟಾಳ್ ನಾಗರಾಜ್ ಬೆಂಬಲ ಕೊಟ್ಟಿಲ್ಲ. ಬಂದ್ ಹಕ್ಕನ್ನು ವಾಟಾಳ್ ನಾಗರಾಜ್ ಗೆ ಬರೆದು ಕೊಟ್ಟಿದ್ದೀವಾ? ಹೊಸಬರನ್ನ ಅವರು ಬೆಳೆಸುತ್ತಿಲ್ಲ. ಕೆಲವರಿಂದ ನ್ಯಾಯ ಸಿಗಲ್ಲ. ನಾಳಿನ ಕರ್ನಾಟಕ ಬಂದ್ ಯಶಸ್ವಿಯಾಗಲಿ ನಾವು ಕಾವೇರಿ ಪರ ಇರ್ತೇವೆ ಎಂದು ಚಿಕ್ಕರಂಗೇಗೌಡ್ರು ಅಸಮಾಧಾನ ವ್ಯಕ್ತಪಡಿಸಿದರು.