ಮಂಡ್ಯ: ಕಾವೇರಿಗಾಗಿ ಜಾತಿ-ಭಾಷೆ ಬಿಟ್ಟು ಹೋರಾಟ ಮಾಡಿ ಕಾವೇರಿ ನಮ್ಮೇಲ್ಲರ ಪ್ರಾಣ ಎಂದು ಪರಿಷತ್ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವೇರಿಗಾಗಿ ಜಾತಿ ಭಾಷೆ ಬಿಟ್ಟು ಹೋರಾಟ ಮಾಡಿ. ಕಾವೇರಿ ನಮ್ಮೇಲ್ಲರ ಪ್ರಾಣ, ನಮ್ಮ ಪ್ರಾಣ ಇರಬೇಕಾದ್ರೆ ನೀರು ಬೇಕು. ಎಲ್ಲಾ ಸಮಾಜದವರು ನೀರಿಗಾಗಿ ಹೋರಾಟ ಮಾಡಿ ಎಂದರು.
ರೈತ ಉಳಿದರೆ ಮಾತ್ರ ದೇಶ ಉಳಿಯುತ್ತೆ. ನಾಳಿನ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ಕೊಡ್ತೇವೆ. ಶಾಂತಿಯುತವಾಗಿ ಕಾವೇರಿಗಾಗಿ ಹೋರಾಟ ಮಾಡೋಣಾ. ಸಂಸದರು ಕಾವೇರಿಗಾಗಿ ಆಗ್ರಹಿಸಿ ನ್ಯಾಯ ಕೊಡಿಸಿ. ಕೇಂದ್ರ ಸರ್ಕಾರ ಮದ್ಯೆ ಪ್ರವೇಶ ಮಾಡಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಪ್ರಧಾನಿಗಳು ಭೇಟಿಗೆ ಅವಕಾಶ ಕೊಡ್ತಿಲ್ವೋ ಅಥವಾ ಇವರೇ ಹಿಂಜರಿಯುವ ಕೆಲಸ ಮಾಡ್ತಿದ್ದಾರೋ ಗೊತ್ತಿಲ್ಲ. ಕಾವೇರಿಗಾಗಿ ಕೇಂದ್ರ ಮಧ್ಯೆ ಪ್ರವೇಶ ಮಾಡಲಿ ಸಮಸ್ಯೆ ಬಗೆಹರಿಸಲಿ ಎಂದು ಹೇಳಿದರು.