Sunday, April 20, 2025
Google search engine

Homeರಾಜ್ಯಯಾದಗಿರಿಯಲ್ಲಿ ರೈಲು ತಡೆಯಲು ಯತ್ನ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಯಾದಗಿರಿ: ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಬಂದ್ ಗೆ ಬೆಂಬಲಿಸಿ ಬೆಳ್ಳಂಬೆಳಗ್ಗೆ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿವೆ.

ಕರವೇ (ಪ್ರವೀಣಶೇಟ್ಟಿ ಬಣ) ಕಾರ್ಯಕರ್ತರು ರೈಲು ನಿಲ್ದಾಣ ಮುತ್ತಿಗೆ ಹಾಕಲು ಯತ್ನಿಸಿದ್ದು, ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ನಾಗರಕೊಯಿಲ್ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ತಡೆದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ. 20ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಪ್ರವೀಣ್ ಶೆಟ್ಟಿ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ನೇತೃತ್ವದಲ್ಲಿ ಮುತ್ತಿಗೆಗೆ ಯತ್ನಿಸಲಾಗಿತ್ತು.

ಇದನ್ನು ಹೊರತುಪಡಿಸಿ ಕರ್ನಾಟಕ ಬಂದ್ ಬಿಸಿ ಯಾದಗಿರಿ ನಗರದಲ್ಲಿ ನೀರಸ ವಾತಾವರಣ ಕಂಡುಬಂದಿದೆ. ಕರ್ನಾಟಕ ಬಂದ್ ಗೆ ಯಾದಗಿರಿ ನಗರದಲ್ಲಿ ಸದ್ಯಕ್ಕೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ನಗರದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ವ್ಯಾಪಾರ ಆರಂಭ ಮಾಡಲಾಗಿದೆ.

ಖಾಸಗಿ ವಾಹನ, ಆಟೋ ಸಂಚಾರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರ ಯಥಾಸ್ಥಿತಿಯಿದ್ದು, ಜನರು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಹೊಟೇಲ್, ಟೀ ಶಾಪ್ ಎಂದಿನಂತೆ ಕಾರ್ಯನಿರ್ವಹಿಸಿತ್ತಿದ್ದು, ಶಾಲಾ ಕಾಲೇಜುಗಳು ಸಹ ನಡೆಯಲಿವೆ.

RELATED ARTICLES
- Advertisment -
Google search engine

Most Popular