ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು(ಸೆ.೨೯) ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ವಿವಿಧ ಸಂಘಟನೆಗಳು ಉತ್ತಮ ಬೆಂಬಲ ನೀಡಿದೆ. ಕರ್ನಾಟಕ ಬಂದ್ ಎಫೆಕ್ಟ್ ಪ್ರವಾಸಿ ತಾಣಗಳಿಗೂ ತಟ್ಟಿದ್ದು, ಪ್ರವಾಸಿಗರಿಲ್ಲದೆ ಮೈಸೂರು ಅರಮನೆ ಭಣಗುಡುತ್ತಿದೆ. ಯಾವಾಗಲೂ ಸಾವಿರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮೈಸೂರು ಅರಮನೆ, ಇಂದು ಕೇವಲ ಬೆರಳೆಣಿಕೆಯಷ್ಟು ಪ್ರವಾಸಿಗರ ಭೇಟಿಯಿಂದ ಖಾಲಿ ಖಾಲಿಯಾಗಿದೆ. ಪ್ರತಿಭಟನಾಕಾರರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ ಹಿನ್ನೆಲೆ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿಲ್ಲ.