ಚಾಮರಾಜನಗರ: ರಾಷ್ಟ್ರ ಕ್ಕಾಗಿ ತಮ್ಮ ಇಡೀ ಜೀವನವನ್ನು ಹಾಗೂ ಜ್ಞಾನವನ್ನು ಸಮರ್ಪಿಸಿದ ಶ್ರೇಷ್ಠ ವಿಜ್ಞಾನಿ ಡಾ. ಎಂ ಎಸ್ ಸ್ವಾಮಿನಾಥನ್ ರವರಿಗೆ ಗೌರವ ಶ್ರದ್ಧಾಂಜಲಿಯನ್ನು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಸಲ್ಲಿಸಿದ್ದಾರೆ.
ಜಗತ್ತಿನ ಶ್ರೇಷ್ಠ ಜ್ಞಾನಿಗಳಾಗಿ ,ವಿಜ್ಞಾನ ಕ್ಷೇತ್ರದಲ್ಲಿ ವಿಶೇಷವಾಗಿ ಸಂಶೋಧನೆಗಳನ್ನು ನಡೆಸಿ, ಕೃಷಿ ಕ್ಷೇತ್ರದ ಮೂಲಕ ಭಾರತದ ದಿವ್ಯ ಪಥವನ್ನು ಬದಲಾಯಿಸಿ ಕೃಷಿ ಕ್ಷೇತ್ರದಲ್ಲಿ ಜಗತ್ತಿಗೆ ಮಾದರಿಯಾಗುವಂತೆ ಭಾರತವನ್ನು ನಿರ್ಮಿಸಲು ಅವರ ಮಾರ್ಗದರ್ಶನ, ಸಲಹೆ, ಸಂಶೋಧನೆಗಳು ಸಹಕಾರಿಯಾಗಿ ಆ ಮೂಲಕ ಇಡೀ ಜಗತ್ತಿಗೆ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಆಯಿತು. ಇವರ ಚಿಂತನೆಯ ಫಲವಾಗಿ ಆಹಾರದ ಕ್ರಾಂತಿ ಕೃಷಿ ಕ್ರಾಂತಿಯಾಗಿ ಕೋಟ್ಯಾಂತರ ರೈತರ ಬದುಕು ಹಾಗೂ ಜೀವನ ಉನ್ನತವಾಗಲು ಸಾಧ್ಯವಾಯಿತು.
98 ವರ್ಷಗಳ ಕಾಲ ಬದುಕಿ ಬಾಳಿದ ಶ್ರೇಷ್ಠ ಜೀವಿ ಡಾ.ಎಂ ಎಸ್ ಸ್ವಾಮಿನಾಥನ್ ರವರ ಆದರ್ಶ ಜೀವನ ಮೌಲ್ಯಗಳು ಅವರ ಸಂಶೋಧನೆ ಹಾಗೂ ರಾಷ್ಟ್ರಕ್ಕೆ ಸಮರ್ಪಿಸಿದ ಅವರ ದಿವ್ಯಶಕ್ತಿಯ ಚಿಂತನೆಗಳು ಇಡೀ ಭಾರತೀಯ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಮಾರ್ಗದರ್ಶಿಯಾಗಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸ್ವಾಮಿನಾಥನ್ ರವರಂತೆ ಯುವ ಸಮುದಾಯ ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ಮಾನಸಿಕತೆಯನ್ನು ಬೆಳೆಸುವ ದಿಕ್ಕಿನಲ್ಲಿ ನಾವೆಲ್ಲರೂ ಪ್ರಯತ್ನಿಸಿ ವಿಶೇಷ ಪ್ರಯತ್ನವನ್ನು ಕೂಡಿ ಮಾಡೋಣವೆಂದು ಆ ಮೂಲಕ ಅವರಿಗೆ ಗೌರವ ಸಲ್ಲಿಸುವ ಮೂಲಕ ಆತ್ಮಕ್ಕೆ ಶಾಂತಿಯನ್ನು ಕೋರೋಣ ಎಂದು ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.