ಮಂಡ್ಯ: ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರದ ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ರೈತ ನಾಯಕಿ ಸುನಂದ ಜಯರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಸ್ತೆಯಲ್ಲೇ ಬಾಯಿ ಬಡಿದುಕೊಂಡು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ದೆಹಲಿಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ CWRC ಆದೇಶ ಪಾಲಿಸಲು CWMA ಸೂಚನೆ ನೀಡಿದ್ದು, 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದ CWRC ಆದೇಶಿಸಿದೆ.
6 ಗಂಟೆಯೊಳಗೆ ಪ್ರಾಧಿಕಾರದ ಆದೇಶದ ಬಗ್ಗೆ ಸರ್ಕಾರ ಮಾತಾಡಬೇಕು. 6 ಗಂಟೆಯೊಳಗೆ ಸಭೆಯಲ್ಲಿ ಚರ್ಚಿಸಿ ಮುಂದಿನ ನಡೆ ನಿರ್ಧಾರ ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ಸಂಜೆ 6 ಗಂಟೆವರೆಗೆ ಗಡುವು ನೀಡುವುದಾಗಿ ರೈತ ನಾಯಕಿ ಸುನಂದ ಜಯರಾಂ ಎಚ್ಚರಿಕೆ ನೀಡಿದರು.
ಪ್ರಾಧಿಕಾರದ ಆದೇಶವನ್ನ ಖಂಡಿಸ್ತೇವೆ, ವಿರೋಧಿಸ್ತೇವೆ. ಈ ಪ್ರಾಧಿಕಾರವನ್ನೇ ರದ್ದು ಮಾಡಬೇಕು. ಈ ಸರ್ಕಾರದ ಪಂಚೇದ್ರೀಯಗಳೆಲ್ಲವೂ ಸತ್ತು ಹೋಗಿದೆ ಎಂದು ರೈತ ನಾಯಕಿ ಸುನಂದ ಜಯರಾಂ ಆಕ್ರೋಶ ಹೊರಹಾಕಿದರು.