ಮಂಡ್ಯ: ಆದೇಶ ಧಿಕ್ಕರಿಸಿ ನೀರು ನಿಲ್ಲಿಸಿ, ನಿಮ್ಮ ಜೊತೆ ನಾವಿದ್ದೇವೆ ಮಂಡ್ಯ ಜನರು ನಿಮ್ಮ ಜೊತೆ ನಿಲ್ತಾರೆ ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಹೇಳಿದರು.
ಕಾವೇರಿ ಪ್ರಾಧಿಕಾರ ಬರೆಯ ಮೇಲೆ ಬರೆ ಹಾಕ್ತಿದೆ. ನಮ್ಮ ಜಿಲ್ಲೆಯ ರೈತರನ್ನ ಪ್ರಾಧಿಕಾರ ಕೆಣಕುತ್ತಿದೆ. ಚಳವಳಿಯನ್ನ ತೀವ್ರಗೊಳಿಸಲು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ ಎಂದರು.
ಹಾಲಿ ಶಾಸಕರು ಸ್ಪಂದಿಸುವ ಕೆಲಸ ಆಗ್ತಿಲ್ಲ. ಮಾಜಿ ಶಾಸಕರ ನೇತೃತ್ವದಲ್ಲಿ ಹೋರಾಟ ಮಾಡ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಚಳವಳಿ ಮುಂದುವರೆಯುತ್ತೆ. ನ್ಯಾಯಕ್ಕಾಗಿ ಹೋರಾಟ ಮಾಡಲೇ ಬೇಕು. ಯಾವ ನ್ಯಾಯ ಮಂಡಲಿ, ಪ್ರಾಧಿಕಾರದಿಂದ ಸಿಗಲ್ಲ. ಯಾವ ಸರ್ಕಾರ ಕೂಡ ನ್ಯಾಯ ಕೊಡಿಸಲ್ಲ ಎಂದರು.
ಪ್ರಾಧಿಕಾರ ಸೂಚನೆ ಕೊಡದಿದ್ದರು ಆಗಲೇ ಗೇಟ್ ತೆಗೆದು ನೀರು ಬಿಡಲು ನಿಂತಿರುತ್ತಾರೆ. ಆದೇಶ ಬಂದ ಒಂದು ಗಂಟೆಯಲ್ಲಿ ನೀರು ಹೆಚ್ಚಾಗಿದೆ. ನಮ್ಮ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದರಲ್ಲಿ ಉತ್ಸಾಹಕರರಿದ್ದಾರೆ. ಅವಿವೇಕತನ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡ್ತಿದೆ ಎಂದು ಆರೋಪಿಸಿದರು.
ತಕ್ಷಣವೇ ನೀರು ನಿಲ್ಲಿಸಿ, ಆದೇಶ ದಿಕ್ಕರಿಸಿ ನಾವು ನಿಮ್ಮ ಜೊತೆ ಇದ್ದೇವೆ. ನಮ್ಮ ಮಂಡ್ಯ ಜನರು ನಿಮ್ಮ ಜೊತೆ ನಿಲ್ತಾರೆ. ಕುಡಿಯುವುದಕ್ಕಾದ್ರು ನೀರು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.
ಮತ್ತೆ ನಮಗೆ ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇತ್ತು. ಕಾವೇರಿ ನಿರ್ವಾಹಣಾ ಮಂಡಳಿ ಕರ್ನಾಟಕವನ್ನ ಕೈ ಬಿಟ್ಟಿದ್ದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ನಾಟಕ ಇದೆ. ಕುಡಿಯುವ ನೀರನ್ನು ಸಹ ಪ್ರಾಧಿಕಾರ ಒದಗಿಸಿ ಕೊಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿ ಜನರ ಪರ ನಿಲ್ಲಿ ನಿಮ್ಮ ಜೊತೆ ನಾವೀದ್ದೇವೆ. ಯಾವುದೇ ಕಾರಣಕ್ಕೂ ನೀರು ಬಿಡಬೇಡಿ ಎಂದರು.
ನೀರು ನಿಲ್ಲಿಸದಿದ್ದರೆ ಹಾಲಿ-ಮಾಜಿ ಶಾಸಕರ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು. ತಾಲ್ಲೂಕು ಮಟ್ಟದಿಂದ ಚಳವಳಿ ಮಾಡ್ತೇವೆ. ಪ್ರಾಧಿಕಾರವನ್ನು ರದ್ದು ಪಡಿಸಿ ಇದು ಅವಶ್ಯಕತೆ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳು ರೈತರ ಪರವಾಗಿ ಧೃಡ ನಿರ್ಧಾರ ತೆಗೆದುಕೊಳ್ಳಿ ಎಂದರು.
ಕಾವೇರಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹೋರಾಟ. ಮುಂದೆ ಜನ ಪ್ರತಿನಿಧಿ ಮನೆ ಮುಂದೆ ಹೋರಾಟ ಮಾಡ್ತಾರೆ. ಎಲ್ಲರು ಒಗ್ಗಟ್ಟಿನಿಂದ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕು. ರಾಜ್ಯ ಸರ್ಕಾರ ಸಧೃಡ ನಿರ್ಧಾರ ತೆಗೆದುಕೊಳ್ಳಿ. ಕಾವೇರಿಯನ್ನ ನಾವು ರಾಜಕಾರಣಕ್ಕೆ ಬಳಸಿಕೊಳ್ತಿಲ್ಲ. ಅವರು ಪಾದಯಾತ್ರೆ ಮಾಡಿದ್ರು ರಾಜಕೀಯ ಬೆರಸಿದ್ರಾ? ರಾಜಕೀಯ ಬಿಟ್ಟು ಕಾವೇರಿಗಾಗಿ ಕೈ ಜೋಡಿಸಿ. ಸಂಸದರು ಸಹ ಧ್ವನಿ ಎತ್ತಿ ಎಂದರು.