ಯಳಂದೂರು: ತಾಲೂಕಿನ ಪ್ರಸಿದ್ಧ ಪ್ರವಾಸಿತಾಣವಾಗಿರುವ ಬಿಳಿಗಿರಿಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಹುಂಡಿಯಲ್ಲಿ ೩೨.೦೨ ಲಕ್ಷ ರೂ. ಸಂಗ್ರಹವಾಗಿದೆ.
ದೇಗುಲದ ಆವರಣದಲ್ಲಿ ನಡೆದ ಹುಂಡಿ ಹಣ ಎಣಿಕೆ ನಡೆಯಿತು. ಇದರಲ್ಲಿ ನೋಟುಗಳ ರೂಪದಲ್ಲಿ ೩೦.೫೦ ಲಕ್ಷ ರೂ. ಹಾಗೂ ನಾಣ್ಯಗಳ ರೂಪದಲ್ಲಿ ೧.೫೨ ಲಕ್ಷ ರೂ ಕಾಣಿಕೆ ಬಿದ್ದಿದೆ. ಇದಲ್ಲದೆ ೪೦ ಅಮೆರಿಕನ್ ಡಾಲರ್‌ಗಳನ್ನು ಕೂಡ ಭಕ್ತರು ದೇವರ ಹುಂಡಿಗೆ ಸಮರ್ಪಿಸಿದ್ದಾರೆ.
ಈ ಎಣಿಕೆ ಕಾರ್ಯದಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ನೇತೃತ್ವದಲ್ಲಿ ಇವರ ನೌಕರ ವರ್ಗ, ಕಂದಾಯ ಇಲಾಖೆಯ ಸಿಬ್ಬಂಧಿ ಹಾಗೂ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಸಿಬ್ಬಂಧಿಹಾಜರಿದ್ದರು.