Sunday, April 20, 2025
Google search engine

Homeಸ್ಥಳೀಯಮೈಸೂರಿನಲ್ಲಿ ಸಿರಿಧಾನ್ಯಗಳ ವಸ್ತುಪ್ರದರ್ಶನ

ಮೈಸೂರಿನಲ್ಲಿ ಸಿರಿಧಾನ್ಯಗಳ ವಸ್ತುಪ್ರದರ್ಶನ

ಮೈಸೂರು: ಎರಡು ದಿನದ ಡಿಎಫ್‌ಆರ್‌ಎಲ್ – ಡಿಆರ್‌ಡಿಒ ಆಯೋಜನೆ ಮಾಡಿರುವ ಸಿರಿಧಾನ್ಯಗಳ ವಸ್ತುಪ್ರದರ್ಶನದಲ್ಲಿ ಪ್ರಿಯ ಫುಡ್‌ನ ಮಳಿಗೆ ಎಲ್ಲರ ಗಮನ ಸೆಳೆಯಿತು. ಜನರು ಪ್ರಿಯ ಫುಡ್ ಮಳಿಗೆಗೆ ತಂಡೋಪ ತಂಡವಾಗಿ ಆಗಮಿಸಿ ಪ್ರಿಯ ಫುಡ್‌ನ ಸಿರಿಧಾನ್ಯ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಅವುಗಳ ರುಚಿ ಸವಿದು ಸಂತಸ ವ್ಯಕ್ತಪಡಿಸಿದರು. ಮೈಸೂರಿನ ಡಿಎಫ್‌ಆರ್‌ಎಲ್ – ಡಿಆರ್‌ಡಿಒದಿಂದ ಎರಡು ದಿನದ ಮಿಲಿಟರಿ ಪಡಿತರ ಮತ್ತು ನಿರ್ದಿಷ್ಟ ಪೌಷ್ಠಿಕಾಂಶಗಳ ಅವಶ್ಯಕತೆಗಳಿಗಾಗಿ ಸಿರಿಧಾನ್ಯಗಳ ರಾಷ್ಟ್ರೀಯ ಸಮ್ಮೇಳನವನ್ನು ಸೆ.೨೯ ಮತ್ತು ೩೦ರಂದು ನಡೆಸಲಾಗುತ್ತಿದೆ.

ಒಂದು ಕಡೆ ಸಿರಿಧಾನ್ಯ ಕುರಿತು ಗೋಷ್ಠಿಗಳು ನಡೆದರೆ ಮತ್ತೊಂದೆಡೆ ಸಿರಿಧಾನ್ಯಗಳ ವಸ್ತುಪ್ರದರ್ಶನವನ್ನು ನಡೆಸಲಾಗುತ್ತಿದೆ. ಇನ್ನು ಸಿರಿಧಾನ್ಯ ಆಹಾರ ಪದಾರ್ಥಗಳ ಪ್ರದರ್ಶನದಲ್ಲಿ ಪ್ರಿಯ ಫುಡ್ ಮಳಿಗೆ ಜನರನ್ನು ಆಕರ್ಷಿಸಿತು. ಪ್ರಿಯ ಫುಡ್‌ನ ಮಳಿಗೆಯಲ್ಲಿ ಸಿರಿಧಾನ್ಯಗಳಿಂದ ತಯಾರು ಮಾಡಲಾಗಿದ್ದ ಬಗೆಬಗೆಯ ತಿನಿಸುಗಳ ಬಗ್ಗೆ ಮಳಿಗೆಯಲ್ಲಿದ್ದ ಪ್ರಿಯ ಫುಡ್‌ನ ಸಿಬ್ಬಂದಿ, ಮಳಿಗೆಗೆ ಭೇಟಿ ನೀಡುತ್ತಿದ್ದ ಜನರಿಗೆ ೩೦ಕ್ಕೂ ಹೆಚ್ಚು ಸಿರಿಧಾನ್ಯಗಳಿಂದ ತಯಾರು ಮಾಡಿದ್ದ ತಿನಿಸುಗಳ ಪರಿಚಯ ಮಾಡಿಕೊಟ್ಟರು.

ನಾವು ಸಿರಿಧಾನ್ಯ ಪದಾರ್ಥಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ನಮ್ಮ ಕಂಪನಿಯಿಂದ ಆರೋಗ್ಯಕರವಾದ ಸಿರಿಧಾನ್ಯಗಳಿಂದ ಬಗೆ ಬಗೆಯ ತಿನಿಸುಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮಲ್ಲಿ ೯ ಬಗೆಯ ಉತ್ಪನ್ನಗಳಿವೆ. ಚಿಕ್ಕಮಕ್ಕಳಿಗೆ ಕುಕೀಸ್ ಇದೆ. ಇವುಗಳು ಸಕ್ಕರೆ ಮುಕ್ತವಾಗಿದ್ದು, ಬೆಲ್ಲದಿಂದ ತಯಾರಿಸಲಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ನಮ್ಮ ಕಂಪನಿಯ ಉದ್ದೇಶ ಜನರಿಗೆ ಆರೋಗ್ಯಕರವಾದ ಆಹಾರ ಪದಾರ್ಥವನ್ನು ನೀಡುವುದಾಗಿದೆ ಎಂದರು.

RELATED ARTICLES
- Advertisment -
Google search engine

Most Popular