ಹೊಸೂರು : ಕೆ.ಆರ್.ನಗರ ಪಟ್ಟಣದ ಶ್ರೀಕೃಷ್ಣ ರಾಜೇಂದ್ರ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ನಡೆದ ತಾಲೂಕು ಮಟ್ಟದ ಗ್ರಾಮೀಣ ದಸಾರ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಎಂ.ಎಸ್.ಹೊನ್ನುಶ್ರೀ 7 ಬಹುಮಾನಗಳನ್ನು ಪಡೆದು ಅತಿ ಹೆಚ್ಚು ಪ್ರಶಸ್ತಿ ಪಡೆದ ಹೆಗ್ಗಳಿಗೆ ಪಾತ್ರವಾಗಿದ್ದಾಳೆ.
ಹೊನ್ನುಶ್ರೀ ಅವರು ಸಾಲಿಗ್ರಾಮ ತಾಲೂಕು ಕಚೇರಿಯ ಶಿರಸ್ತೆದಾರ್ ಆಗಿರುವ ಮೇಲೂರು ಎಂ.ಸಿ.ಶಿವಕುಮಾರ್ ಮತ್ತು ಸ್ಮಿತಾ ದಂಪತಿಗಳ ಪುತ್ರಿ ಹಾಗು ಕೆ.ಆರ್.ನಗರ ಪಟ್ಟಣದ ಆಲ್ಪ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ 200 ಮೀಟರ್ ಓಟ ಪ್ರಥಮ, 4100 ಮೀಟರ್ ರಿಲೇ ಪ್ರಥಮ, 4400 ಮೀಟರ್ ರಿಲೇ ಪ್ರಥಮ, 100 ಮೀಟರ್ ಓಟ ದ್ವಿತೀಯ, ಕೊಕ್ಕೋ ಪ್ರಥಮ, ವಾಲಿಬಾಲ್ ದ್ವಿತೀಯ, ಥ್ರೋ ಬಾಲ್ ದ್ವಿತೀಯ ಸ್ಥಾನಗಳನ್ನು ಗಳಿಸಿದ್ದಾಳೆ.
ಈಕೆಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸುವುದಾಗಿ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.