ಮಂಡ್ಯ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರುನಲ್ಲಿ ಶಿಂಷಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಕಿರಾತಕರು ಕಾಡಿನಲ್ಲಿ ಸ್ವಾಭಾವಿಕವಾಗಿ ಮೃತಪಟ್ಟಿದ್ದ ಆನೆಯ ಎರಡು ದಂತಗಳನ್ನು ಕದ್ದು ಅರಣ್ಯದಲ್ಲಿ ಬಚ್ಚಿಟ್ಟಿದ್ದ ಕಳ್ಳರು ಸಿಕ್ಕಿಬಿದ್ದದ್ದಾರೆ.
ಭರ್ಜರಿ ಕಾರ್ಯಾಚರಣೆ ಮೂಲಕ ಆನೆ ದಂತ ಕದ್ದ ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಸಿದ್ದಾರೆ. ಅರಣ್ಯ ಪ್ರದೇಶದ ಮರಕುಚಲಕು ಎಂಬ ಸ್ಥಳದಲ್ಲಿ ಸಾವನ್ನಪ್ಪಿದ್ದ ಸುಮಾರು ೨೦ ರಿಂದ ೨೧ ವರ್ಷ ವಯಸ್ಸಿನ ಗಂಡಾನೆ. ಸ್ಥಳ ಪರಿಶೀಲನೆ ನಡೆಸಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು. ಈ ವೇಳೆ ಆನೆಯ ದಂತಗಳೆರಡು ಕಳ್ಳತನವಾಗಿದ್ದು ಬೆಳಕಿಗೆ ಬಂದಿತ್ತು.
ವಲಯ ಅರಣ್ಯಾಧಿಕಾರಿಗಳಾದ ರವಿ ಬುರ್ಜಿ ನೇತೃತ್ವದಲ್ಲಿ ತನಿಖೆ ವೇಳೆ ಸಿಕ್ಕಿಬಿದ್ದ ಮುತ್ತತ್ತಿ ಗ್ರಾಮದ ಕೋಣನ ಕರಿಯ ಹಾಗೂ ಸಿದ್ದರಾಜು ದಂತಗಳನ್ನು ಕದ್ದು ಅರಣ್ಯದಲ್ಲಿ ಬಚ್ಚಿಟ್ಟಿದ್ದ ಕಿರಾತಕರು. ಅರಣ್ಯ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿ ದಂತಗಳ ಸಮೇತ ಆರೋಪಿಗಳ ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ರಕ್ಷಣೆ ಕಾಯ್ದೆ ೧೯೭೨ರಡಿ ಪ್ರಕರಣ ದಾಖಲಾಗಿದೆ.