ಧಾರವಾಡ: ಮಹಾತ್ಮ ಗಾಂಧೀಜಿಯವರ ಜಯಂತಿ ನಿಮಿತ್ತ ಕಮಲಾಪುರ ಉಸುಕಿನ ಅಡ್ಡೆ ಬಳಿಯ ಪ್ರದೇಶದಲ್ಲಿ ಬ್ಯಾಂಕ್ ಆಫ್ ಬರೋಡಾ ಅಧಿಕಾರಿ, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಶ್ರಮದಾನ ಹಾಗೂ ಸ್ವಚ್ಛತೆ ನೆರವೇರಿಸಿದರು.
ಆರ್.ಎಂ.ಓ ವಡ್ಡೆ ಶ್ರೀಹರಿ, ಡಿ.ಆರ್. ಎಂ.ಓ ಪ್ರಶಾಂತಕುಮಾರ ಕಡಲೆ, ಜಿಲ್ಲಾ ಲೀಡಿಂಗ್ ಮ್ಯಾನೇಜರ್ ಪ್ರಭುದೇವ ಇಂದಿನ ಸ್ವಚ್ಛತಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು. ಧಾರವಾಡ ಬ್ಯಾಂಕ್ ಆಫ್ ಬರೋಡ ನಾರಾಯಣಪುರ ಮತ್ತು ಸರಸ್ವತಿಪುರ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಸುಜೀತ್ ಚಕ್ರವರ್ತಿ ಮತ್ತು ವಿನಯ್ ಇರಕಲ್, ಹಿರಿಯ ವ್ಯವಸ್ಥಾಪಕ ಸುಮುಖ ಸೌದಾಗರ, ಧಾರವಾಡ ಎಫ್.ಎಲ್.ಸಿ ನಿಂಗಪ್ಪ ಎನ್.ಮಡಿವಾಳರ ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕ ಮಧುಕೇಶ್ವರ ರಾಯ್ಕರ್, ವಾರ್ಡ್ ಮೇಲ್ವಿಚಾರಕ ಅಕ್ಕಕಿ ಜಗದೀಶ್. ಹಾಗೂ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ, ಸಾರ್ವಜನಿಕರು, ಪೌರ ಕಾರ್ಮಿಕರು ಭಾಗವಹಿಸಿದ್ದರು.
