ಮಂಡ್ಯ: ಕರ್ನಾಟಕದ ಎಂಪಿಗಳಿಗೆ ಘೇರಾವ್ ಮಾಡಿ. ಸಂಸದರಿಗೆ ತಪ್ಪ ಪಾಠ ಕಲಿಸುವ ಕೆಲಸ ಆಗಬೇಕು ಎಂದು ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದರ ಮನೆಗಳ ಮುಂದೆ ಹೋರಾಟ ಮಾಡಬೇಕು ಎಂದರು.
ಪ್ರಧಾನಿ ಅವರು ಮಧ್ಯೆ ಪ್ರವೇಶ ಮಾಡಬೇಕು. ಸಂಸದರೆಲ್ಲರು ಸಹ ನೀರಿನ ಬಗ್ಗೆ ಧ್ವನಿ ಎತ್ತಬೇಕು. ಇಲ್ಲ ಮನೆಗೆ ಕಳುಹಿಸುವ ಕೆಲಸ ಮಾಡಿ. ಬಿಜೆಪಿಯ ಎಂಪಿಗಳು ಕನ್ನಡಿಗರಿಗೆ ಅನ್ಯಾಯ ಮಾಡಬೇಡಿ. ಮುಂದಿನ ಚುನಾವಣೆಯಲ್ಲಿ ಜನರು ತಪ್ಪ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ತಮಿಳುನಾಡಿಗೆ ಹೋಗುತ್ತಿರುವ ನೀರನ್ನ ನಿಲ್ಲಿಸಿ. ನಮ್ಮ ನೀರು ನಮಗೆ ಉಳಿಸಿಕೊಡಿ ಎಂದು ಒತ್ತಾಯಿಸಿದರು.