ತುಮಕೂರು: ತಿಪಟೂರು ಪ್ರತ್ಯೇಕ ಜಿಲ್ಲೆ ಕನಸು ಸದ್ಯಕ್ಕೆ ನನಸಾಗೊದಿಲ್ಲ. ಸರ್ಕಾರದ ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿಬಿಟ್ಟಿವೆ ಎಂದು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಹೇಳಿದರು.
ತಿಪಟೂರಿನಲ್ಲಿ , ಗಾಂಧಿ ಜಂಯತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಜೊತೆ ಅರಸೀಕೆರೆಯನ್ನ ಸೇರಿಸಿಕೊಂಡು ತಿಪಟೂರನ್ನ ಜಿಲ್ಲೆ ಮಾಡುವಂತೆ ಒತ್ತಾಯ ಮಾಡಿದ್ದೇನೆ. ಕೆ.ಎನ್ ರಾಜಣ್ಣ ತಿಪಟೂರು, ಮಧುಗಿರಿ ಎರಡು ಜಿಲ್ಲಾ ಕೇಂದ್ರ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ತಿಪಟೂರು, ಮಧುಗಿರಿ ಜಿಲ್ಲಾ ಕೇಂದ್ರ ರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪರಿಶೀಲಿಸಿ ಎಂದಿದ್ದಾರೆ. ಪರಿಶೀಲಿಸಿ ಅಂದ್ರೆ ಆಗೊದಿಲ್ಲ ಸೂಕ್ತ ಕ್ರಮಕೈಗೊಳ್ಳಿ ಅಂದ್ರೆ ಮಾತ್ರ ಕಾರ್ಯ ರೂಪಕ್ಕೆ ಬರುತ್ತದೆ ಎಂದರು.
ಬೆಳಗಾವಿ 18 ಕ್ಷೇತ್ರಗಳಿದೆ ಅದು ಮೊದಲು ಆಗಬೇಕು. ತಿಪಟೂರು, ಮಧುಗಿರಿ ಜಿಲ್ಲಾ ಕೇಂದ್ರದ ಕನಸು ಸದ್ಯಕ್ಕೆ ಈಡೇರುವುದಿಲ್ಲ. ಸರ್ಕಾರದ ಐದು ಗ್ಯಾರಂಟಿಗಳು ನಮ್ಮನ್ನು ಮಲಗಿಸಿಬಿಟ್ಟಿವೆ ಎಂದು ಹೇಳಿದರು.