Sunday, April 20, 2025
Google search engine

Homeರಾಜ್ಯಎಫ್ ಐಆರ್ ದಾಖಲಾದರೂ ಆರೋಪಿ ಬಂಧಿಸದ ಪೊಲೀಸರು: ನ್ಯಾಯಕ್ಕಾಗಿ ಗೃಹ ಸಚಿವರ ಬಳಿ ಅಂಗಾಲಾಚಿದ ಮಹಿಳೆ

ಎಫ್ ಐಆರ್ ದಾಖಲಾದರೂ ಆರೋಪಿ ಬಂಧಿಸದ ಪೊಲೀಸರು: ನ್ಯಾಯಕ್ಕಾಗಿ ಗೃಹ ಸಚಿವರ ಬಳಿ ಅಂಗಾಲಾಚಿದ ಮಹಿಳೆ

ತುಮಕೂರು: ನ್ಯಾಯಕ್ಕಾಗಿ ಗೃಹ ಸಚಿವರ ಬಳಿ ಕೈ ಮುಗಿದು ಮಹಿಳೆಯೊಬ್ಬರು ಅಂಗಾಲಾಚಿದ್ದು, ಎಫ್ ಐಆರ್ ದಾಖಲಾದ್ರು ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ತುಮಕೂರಿನಲ್ಲಿ ನಡೆದ ಹಳ್ಳಿಕಾರ್ ಕಾರ್ಯಕ್ರಮದಲ್ಲಿ ಘಟನೆ ನಡೆದಿದ್ದು, ಕಟ್ಟಡದ ಬಾಡಿಗೆ ಕೇಳಿದ್ದಕ್ಕೆ ತಿಪಟೂರು ತಾಲೂಕಿನ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಿಂಗರಾಜು, ಶಾಹಿನ್ ತಾಜ್, ಗುಜರ್ ಬಾನು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ತಿಪಟೂರು ಪಟ್ಟಣದಲ್ಲಿ ಶಾಹಿನ್ ತಾಜ್ ಗೆ ಸೇರಿದ ಕಟ್ಟಡದಲ್ಲಿ ಲಿಂಗರಾಜು ಬಾಡಿಗೆ ಇದ್ದ. ಕಳೆದ ಎರಡೂವರೆ ವರ್ಷಗಳಿಂದ ಬಾಡಿಗೆ ಕೊಡದೆ ಸತಾಯಿಸುತ್ತಿದ್ದ. ಬಾಡಿಗೆ ಕೇಳಲು ಹೋಗಿದ್ದ ಶಾಹಿನ್ ತಾಜ್ ಮತ್ತು ಗುಜರ್ ಬಾನು ಮೇಲೆ ಲಿಂಗರಾಜು ಹಲ್ಲೆ ಮಾಡಿದ್ದಾನೆ.

ಹಲ್ಲೆಗೊಳಗಾದ ಮಹಿಳೆ ತಿಪಟೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ದೂರು ದಾಖಲಾಗಿ ನಾಲ್ಕು ದಿನ ಕಳೆದರು ಆರೋಪಿ ಲಿಂಗರಾಜು ನನ್ನ ಪೊಲೀಸರು ಬಂಧಿಸಿಲ್ಲ. ಇದರಿಂದ ಮನನೊಂದ ಮಹಿಳೆ ಖುದ್ದು ಗೃಹ ಸಚಿವರನ್ನೇ ಭೇಟಿ ಮಾಡಿದರು.

ನ್ಯಾಯ ಕೊಡಿಸುವಂತೆ ಹಲ್ಲೆಗೊಳಗಾದ ಮಹಿಳೆಯ ಸಹೋದರಿ ಗೃಹ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular