ಮಂಡ್ಯ: 135 ಸೀಟ್ ಗೆದ್ದಿದ್ದೇವೆ ಎಂದು ಕಾಂಗ್ರೆಸ್ ಗೆ ಅಹಂಕಾರ ಬಂದಿದ್ದು, ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಉಳಿಯಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ತಮಿಳುನಾಡಿಗೆ ನೀರು ಬಿಡದಿರಲು ರೈತರು ಹೋರಾಟ ನಿರಂತರವಾಗಿದೆ ಆದರೆ ಫಲ ಶೂನ್ಯವಾಗಿದೆ. ಸರ್ಕಾರಕ್ಕೆ ಇದರ ಬಗ್ಗೆ ಪರಿಜ್ಞಾನ ಇಲ್ಲ. ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಉಳಿಯಲ್ಲ. ಸರ್ಕಾರಕ್ಕೆ ಗೌರವ ಘನತೆ ಇರಬೇಕು ಎಂದರು.
ಅಧಿಕಾರಕ್ಕು ಬರುವ ಮುನ್ನ ಏನು ಭರವಸೆ ಕೊಟ್ರಿ? ಅನ್ನದಾತರ ಪರ ಇರ್ತೇನೆ ಅಂತ ಹೇಳಿ ನೀವೇ ಅರ್ಜಿ ಹಾಕಿ ಅಂತಿರಾ.? ಕಾವೇರಿಗಾಗಿ ತ್ಯಾಗ ಮಾಡಿ ಏನು ಆಗಲ್ಲ. ಪ್ರತಿ ಜಿಲ್ಲೆಯಲ್ಲಿ ರೈತರು ನಿಮಗೆ ಶಾಪ ಹಾಕ್ತಿದ್ದಾರೆ ಎಂದು ಕಿಡಿಕಾರಿದರು.
ಬೆಳೆ ಹಾಕದಂತೆ ನೋಟಿಸ್ ಕೊಡ್ತಿರಾ? ತಮಿಳುನಾಡಿನವರು 3ನೇ ಬೆಳೆಗೆ ನೀರು ಕೊಳ್ತಿದ್ದಾರೆ ಕೊಡ್ತಿದ್ದಿರಿ. ಚಳವಳಿಗಾರರನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆಯ ಹಿಂದಿನ ಹೋರಾಟ ನೋಡಿ ಸಿದ್ದರಾಮಯ್ಯ ಅವರೇ. ರೈತರನ್ನ ಕೆಣಕುವ ಕೆಲಸ ಮಾಡಬೇಡಿ. ಮಂಡ್ಯ ಜನ ಸಿಡಿದ್ದೆದ್ದು ನಿಂತರೆ ನಿಮ್ಮ ಛೇರು, ಸರ್ಕಾರ ನಡುಗುತ್ತೆ. ರೈತರ ಹೋರಾಟ ಕೇಳಿಸ್ತಿಲ್ವಾ? ನೀರು ಬಿಡ್ತಿದ್ದಿರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಆಗುತ್ತದೆ. ಸರ್ಕಾರ ಕಳೆದು ಕೊಳ್ತಿರಿ ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಸರ್ಕಾರಕ್ಕೆ ಕಿವಿ,ಕಣ್ಣು ಕಾಣ್ತಿಲ್ವ? ಸುಮ್ಮನೆ ಕುಳಿತು ಹೋರಾಟ ಮಾಡ್ತಿದ್ದಾರೆ ಅಂತ ತಾಳ್ಮೆ ಪರೀಕ್ಷೆ ಮಾಡಬೇಡಿ. ಮಂಡ್ಯ ಜಿಲ್ಲೆಯ ಜನರ ಬಳಿ ಗೆಲ್ಲಿಸಲು ಮನವಿ ಮಾಡಿದ್ರಿ. ಮಂಡ್ಯ ಜನರು ತಿರಸ್ಕರಿಸದೆ ನಿಮ್ಮನ್ನ ಗೆಲ್ಲಿಸಿದ್ರು. ಡಿಕೆ ಶಿವಕುಮಾರ್ ನೀರಾವರಿ ಮಂತ್ರಿಯಾಗಿ ಜಿಲ್ಲೆಯ ಜನರ ಕಷ್ಟ ಯಾಕೆ ಕೇಳ್ತಿಲ್ಲ? ಸ್ಟಾಲೀನ್ ಬಗ್ಗೆ ನಿಮಗೆ ಗೌರವ ಜಾಸ್ತಿ ನಿಮಗೆ. ರೈತರ ಬಗ್ಗೆ ಉಡಾಫೆ ಮಾತನಾಡ್ತಿರಾ? ಮಂಡ್ಯ ಜಿಲ್ಲೆಯ ಜನರು ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದರು.