Monday, April 21, 2025
Google search engine

Homeರಾಜ್ಯಸುದ್ದಿಜಾಲಸಿದ್ದರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ ನಡೆದಿದೆ: ಶೋಭಾ ಕರಂದ್ಲಾಜೆ ಆರೋಪ

ಸಿದ್ದರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ ನಡೆದಿದೆ: ಶೋಭಾ ಕರಂದ್ಲಾಜೆ ಆರೋಪ

ಚಾಮರಾಜನಗರ: ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಹಲ್ಲು ತೂರಾಟ ಪ್ರಕರಣ ಸಂಬಂಧ ವಿಪಕ್ಷ ಬಿಜೆಪಿ, ಆಡಳಿತ ಕಾಂಗ್ರೆಸ್ ಸರ್ಕಾರದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಉಡಾಫೆ ಹೇಳಿಕೆ ನೀಡಿದ ಗೃಹಸಚಿವ ಪರಮೇಶ್ವರ ವಿರುದ್ಧವೂ ಗುಡುಗುತ್ತಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಚಾಮರಾಜನಗರದ ಹರಳುಕೋಟೆ ಆಂಜನೇಯನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ದಿನ ಬಿಟ್ಟು ಬೇರೆ ದಿನ ಆಚರಿಸಲು ಕಾರಣವೇನು ಈದ್ ಮಿಲಾದ್ ಅಂದರೆ ಒಂದು ದಿನ ಆಚರಿಸುವ ಹಬ್ಬ ಅಲ್ವಾ? ಎಂದು ಪ್ರಶ್ನಿಸಿದರು. ಅಲ್ಲದೆ, ದಂಗೆ ಎಬ್ಬಿಸಲೆಂದೇ ಒಂದು ದಿನ ಬಿಟ್ಟು ಆಚರಿಸಲಾಗಿದೆ. ಶಿವಮೊಗ್ಗ, ಕೋಲಾರದಲ್ಲಿ ತಲ್ವಾರ್ ಹಿಡಿದು ಮೆರವಣಿಗೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅತಿ ದೊಡ್ಡ ಖಡ್ಗದ ಮೆರವಣಿಗೆ ಮಾಡಲಾಗಿದೆ, ಇದರ ಅರ್ಥವೇನು? ಔರಂಗಜೇಬನ ದೊಡ್ಡ ಫೋಟೋ ಹಾಕಿ ಅಖಂಡ ಭಾರತವನ್ನ ಆಳಿದ ಮಹಾರಾಜ ಎಂಬ ಬರಹಗಳನ್ನ ಬರೆದಿದ್ದಾರೆ. ನಿಮ್ಮ ಆದರ್ಶಪುರುಷ ಮೊಹಮ್ಮದ್ ಪೈಂಗರ್ ಹಾಗೂ ಅಬ್ಧುಲ್ ಕಲಾಮ್ ಆಗಿರಬೇಕು. ಹಿಂದೂಗಳ ರಕ್ತ ಹರಿಸಿದ ಹಿಂದೂಗಳ ಮಾರಣಹೋಮ ನಡೆಸಿದ ಟಿಪ್ಪು ಹಾಗೂ ಔರಂಗಬೇಜ್ ಆಗಿರಬಾರದು ಎಂದರು.

RELATED ARTICLES
- Advertisment -
Google search engine

Most Popular