ಚಿತ್ರದುರ್ಗ : ಆಯುಷ್ಮಾನ್ ಭವ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ 11 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರ ವಿಶೇಷ ಆರೋಗ್ಯ ಮೇಳದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು (ಹೃದಯರೋಗ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್) ಮತ್ತು ಆರೋಗ್ಯ ಸೇವೆಗಳ ಕುರಿತು ವಿಶೇಷ ಆರೋಗ್ಯ ಮೇಳದ ಕುರಿತು ಆರೋಗ್ಯ ತಪಾಸಣೆ ನಡೆಸಲಾಯಿತು.
ಸಮುದಾಯ ಆರೋಗ್ಯ ಕೇಂದ್ರಗಳಾದ ಭರಮಸಾಗರ, ಸಿರಿಗೆರೆ, ಬಿ.ದುರ್ಗ, ಬೆಳಗೂರು, ಕಿತ್ತದಾಳ್ ಕಂಚೀಪುರ, ಶ್ರೀರಾಂಪುರ, ಧರ್ಮಪುರ, ಮರಡಿಹಳ್ಳಿ, ನಾಯಕನಹಟ್ಟಿ, ಪರಶುರಾಂಪುರ, ರಾಂಪುರದಲ್ಲಿ ವಿಶೇಷ ಆರೋಗ್ಯ ತಪಾಸಣಾ ಮೇಳ ನಡೆಯಿತು. ವಿಶೇಷ ಆರೋಗ್ಯ ತಪಾಸಣಾ ಮೇಳದ ಜತೆಗೆ ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸಾ ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ಶಿಬಿರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮರಡಿಹಳ್ಳಿಯಲ್ಲಿ ರಕ್ತದಾನ ಶಿಬಿರ ಹಾಗೂ ಕಿವಿ, ಮೂಗು, ಗಂಟಲು ತಜ್ಞರಿಂದ ವಿಶೇಷ ಆರೋಗ್ಯ ತಪಾಸಣಾ ಮೇಳ ನಡೆಯಲಿದೆ.
ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವನಹಳ್ಳಿ ಗ್ರಾಮದ ಆವರಣದಲ್ಲಿ ಆಯುಜ್ಮಾನ್ ಭವ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಜನಜಾಗೃತಿ ಶಿಬಿರ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ ಕಂಬಳಿಮಠ ಮಾತನಾಡಿ, ಯೋಗಾಭ್ಯಾಸದ ಗುಣಮಟ್ಟದ ಜೀವನದೊಂದಿಗೆ ಆರೋಗ್ಯ ಮತ್ತು ಸ್ವಾಸ್ಥ್ಯ ಸೇವೆಗಳು ನಿಮ್ಮ ಮನೆ ಬಾಗಿಲಿಗೆ ಲಭ್ಯವಿರುತ್ತವೆ. ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಗರ್ಭಾವಸ್ಥೆ, ಅನಿಯಂತ್ರಿತ ಆರೈಕೆ ಮತ್ತು ಮಕ್ಕಳ ಪೋಷಣೆ ಕುರಿತು ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎಸ್.ಮಂಜುನಾಥ್, ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಾಮೈಲಾ, ಆರೋಗ್ಯ ನಿರೀಕ್ಷಕರಾದ ಶ್ರೀಧರ್, ಭಾಗೇಶ್, ಮಾರುತಿ, ಸಮುದಾಯ ಆರೋಗ್ಯಾಧಿಕಾರಿಗಳಾದ ರಮೇಶ್, ಸುಮಲತಾ, ಮೈತ್ರಾ ಬಿರಾದಾರ್, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಕಾತ್ಯಾಯನಮ್ಮ, ಅನಿತಾ, ಲಕ್ಷ್ಮಿ, ರೇಖಾ, ರತ್ನಮ್ಮ, ಆಶಾ ಕಾರ್ಯಕರ್ತೆಯರಾದ ಸರೋಜಮ್ಮ, ಅರುಣ್, ಮಾಣಿಕ್ಯಮ್ಮ ಇದ್ದರು.