ರಾಮನಗರ: ಮನೋ ನಿಗ್ರಹದಿಂದ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ ಎಂದು ಹಿರಿಯ ವಕೀಲ ಅಂಬರೀಶ್ ರವರು ತಿಳಿಸಿದರು.
ಅವರು ರಾಮನಗರ ಜಿಲ್ಲಾ ಕಾರಾಗೃಹ ನಿವಾಸಿಗಳಿಗೆ ಹಸನ್ಮುಖಿ ಸೇವಾ ಟ್ರಸ್ಟ್ ರಾಮನಗರ ಹಾಗೂ ರಾಮನಗರ ಜಿಲ್ಲಾ ಕಾರಾಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ಬಹುದ್ದುರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ಪ್ರಯುಕ್ತ ಮನಃ ಪರಿವರ್ತನೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಹಾಗೂ ಮಾಜಿಲೋಕಾಯುಕ್ತ ಅಭಿಯೋಜಕರು ಆದ ಅಂಬರೀಶ ತಿಳಿಸಿದರು.
ಮನೋ ನಿಗ್ರಹದಿಂದ,ಕ್ಷಮಾ ಗುಣದಿಂದ ನೈತಿಕ ಬಲ ಹೆಚ್ಚುತ್ತದೆ,ಗಾಂಧಿ ತತ್ವಗಳ ಪಾಲನೆ ಯಿಂದ ಶಾಂತಿ,ನೆಮ್ಮದಿ ಹಾಗೂ ಅವರ ಸಾಹಿತ್ಯ ತಿಳಿಯುವುದರಿಂದ ಮನಃ ಪರಿವರ್ತನೆ ಸಾಧ್ಯ,ಮನುಷ್ಯ ಸಂಘ ಜೀವಿ ಸಹನೆ,ತಾಳ್ಮೆ ಬೆಳೆಯುವ ವ್ಯಕ್ತಿಗೆ ವಜ್ರಕವಚದಂತೆ, ದ್ವೇಷ ಅಸೂಯೆಗಳ ನಿಗ್ರಹ ದಿಂದ ನೆಮ್ಮದಿ ಜೀವನ ನಡೆಸಬಹುದು ಎಂದರು
ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ರಾಕೇಶ್ ಕಾಂಬಳೆರವರು ಸ್ವ ಪರಿವರ್ತನೆಯಿಂದ ಗೌರವಾನ್ವಿತ ವ್ಯಕ್ತಿಯಾಗಿ ಬಾಳಬಹುದು, ಗಾಂಧೀಜಿ ರವರ ಜೀವನ ಚರಿತ್ರೆ ನಮ್ಮ ಮುಂದಿರುವ ಸತ್ಯ ಮನ ಸ್ಟೇರ್ಯ ತುಂಬುತ್ತದೆ ಇವರು ಪರಿವರ್ತನೆ ಆಗಿ ಬಿಡುಗಡೆ ಹೊಂದಿ ತಮ್ಮಜೀವನ ಒಳ್ಳೆಯ ರೀತಿಯಲ್ಲಿ ನಡೆಸಲು ನಾವು ಇಂತಹ ಕಾರ್ಯಕ್ರಮ ಗಳ ಜೊತೆಯಲ್ಲಿ ಯೋಗ ಸಂಗೀತ ಕಾನೂನು ಅರಿವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಇಂದು ಹಸನ್ಮುಖಿ ಸೇವಾ ಟ್ರಸ್ಟ್ ಇಂತಹ ಒಳ್ಳೆಯ ರೀತಿಯ ಕಾರ್ಯಕ್ರಮ ನಡೆಸಿ ಕೊಟ್ಟಿರುವುದು ಶ್ಲಾಗನಿಯ ಎಂದು ನುಡಿದರು.
ಲಯನ್ಸ್ ಸಿಲ್ಕ್ ಸಿಟಿ ಸಂಸ್ಥೆ ಅಧ್ಯಕ್ಷೆ ಸುಧಾರಾಣಿ ಇಂತಹ ಕಾರ್ಯಕ್ರಮ ಅಗತ್ಯವಾಗಿ ಬೇಕು ಯಾವ್ದೋ ಆವೇಶ ದಲ್ಲಿ ಮಾಡಿದ ತಪ್ಪನ್ನು ತಿದ್ದಿ ಕೊಂಡು ಪಶ್ಚಾತಾಪ ಪಟ್ಟು ಜೀವನವನ್ನು ಸರಿದಾರಿಗೆ ತರುವುದು ತಮ್ಮ ಕೈಯಲ್ಲಿಯೇ ಇದೆ ಸರಿಪಡಿಸಿಕೊಂಡು ಜೀವನ ಸಾಗಿಸಿ ಎಂದರು ಕಾರಾಗೃಹದ ಜೈಲರ್ ಆದ ಇಮಾಮ್ ಖಾಸಿಂ ಕಾರ್ಯಕ್ರಮ ನಿರೂಪಣೆ ಮಾಡಿದರು. ಲಿಖಿತೇಶ್,ಕಾಜಾಂಚಿ ಅನಂತನಾಗ್, ಡಾಕ್ಟರ್ ಹೇಮಂತ್ ಗೌಡ, ಸಹ ಕಾರ್ಯದರ್ಶಿ ಪ್ರಭು ಅಂಜನಾಪುರ, ಸಬ್ ಜೈಲರ್ ಬಾಬು ಹಾಜರಿದ್ದರು.