Tuesday, April 22, 2025
Google search engine

Homeರಾಜ್ಯರೈತರಿಗೆ ಬೆಂಬಲ ನೀಡಿ, ಅವರ ಪರ ನಿಲ್ತೇವೆ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ

ರೈತರಿಗೆ ಬೆಂಬಲ ನೀಡಿ, ಅವರ ಪರ ನಿಲ್ತೇವೆ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ

ಮಂಡ್ಯ: ಕಾವೇರಿಗಾಗಿ ರೈತರು ನಿರಂತರವಾಗಿ ಹೋರಾಟ ಮಾಡ್ತಿದ್ದಾರೆ. ನಮ್ಮ ನೀರು ನಮ್ಮ ಹಕ್ಕು. ರಾಜಕೀಯಕ್ಕಾಗಿ ಬೇಳೆ ಬೇಯಿಸಿ ಕೊಳ್ತಿದ್ದಾರೆ. ನಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ರೈತರಿಗೆ ಬೆಂಬಲ ನೀಡಿ ಅವರ ಪರ ನಿಲ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಹೇಳಿದರು.

ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯದವರ ಬಗ್ಗೆ ಮಾತನಾಡಲ್ಲ, ರೈತರಿಗೆ ಅನ್ಯಾಯ ಆಗಬಾರದು. ಬೆಂಗಳೂರಿಗರು ಕುಡಿಯುವ ನೀರು ಇಲ್ಲ ಅವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಬೇಕು. ಇನ್ನು 15 ದಿನ ಕಳೆದರೆ ನೀರಿಗೆ ಹಾಹಾಕಾರ ಉಂಟಾಗಲಿದೆ. ನಮ್ಮ ಪರಿಸ್ಥಿತಿಯನ್ನ ರಾಜ್ಯ ಸರ್ಕಾರ ನೋಡಬೇಕು ಎಂದರು.

ಕಾವೇರಿಗಾಗಿ ನಾವು ಹೋರಾಟಾ ಮಾಡ್ತೇವೆ. ಸಂಪೂರ್ಣ ಬೆಂಬಲವನ್ನು ಕೊಡ್ತೇವೆ. ತಕ್ಷಣವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ನಿಲ್ಲಸಿ. ಪ್ರಧಾನ ಮಂತ್ರಿ ಮಧ್ಯೆ ಪ್ರವೇಶಿಸಿ ಎರಡೂ ರಾಜ್ಯದ ಸಿಎಂ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಷ್ಟೆ ಬಿಟ್ಟು ನೀರು ಉಳಿಸಿಕೊಳ್ಳಿ. ಸಂಸದರು ಯಾರು ನೀರಿನ ಕಷ್ಟ ಅರ್ಥಮಾಡಿಕೊಂಡಿಲ್ಲ. ಧ್ವನಿ ಎತ್ತುವ ಕೆಲಸ ಮಾಡಿ, ರಾಜ್ಯದಲ್ಲಿ ಎಲ್ಲಾ ರಾಜ್ಯದ ಜನರು ಇದ್ದಾರೆ. ಅವರಿಗೂ ಕುಡಿಯುವ ನೀರು ಬೇಕು. ತಕ್ಷಣವೇ ನೀರಿನ ಸಮಸ್ಯೆಗಳನ್ನು ಬಗೆಹರಿಸಿ ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular