Tuesday, April 22, 2025
Google search engine

Homeರಾಜ್ಯವಿಶ್ವ ಹಿಂದೂ ಪರಿಷತ್’ನ ಶೌರ್ಯ ರಥಯಾತ್ರೆಗೆ ಅದ್ದೂರಿ ಸ್ವಾಗತ

ವಿಶ್ವ ಹಿಂದೂ ಪರಿಷತ್’ನ ಶೌರ್ಯ ರಥಯಾತ್ರೆಗೆ ಅದ್ದೂರಿ ಸ್ವಾಗತ

ಮದ್ದೂರು: ಹಿಂದೂಗಳ ಜಾಗೃತಿಗಾಗಿ ಆರಂಭವಾದ ವಿಶ್ವ ಹಿಂದೂ ಪರಿಷತ್ 60ರ ಸಂಭ್ರಮದ ನಿಮಿತ್ತ ಶೌರ್ಯ ರಥ ಯಾತ್ರೆ ಮದ್ದೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಯೋಜಿಸಿರುವ ಶೌರ್ಯ ರಥ ಯಾತ್ರೆ ಬುಧವಾರ  ಗಡಿ ಭಾಗ ನಿಡಘಟ್ಟಕ್ಕೆ ಆಗಮಿಸಿದ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಸಂಭ್ರಮದಿಂದ ಬರಮಾಡಿಕೊಂಡರು.

ಪಟ್ಟಣದ ಕೊಲ್ಲಿ ವೃತ್ತದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಗೋ ಪೂಜೆ ನಡೆಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ಮಂಗಳವಾದ್ಯದೊಂದಿಗೆ ದಾಸ ಪರಂಪರೆ ಬಿಂಬಿಸುವ ದಾಸಪ್ಪ ಹಾಗೂ ಜೋಗಿ ಪರಂಪರೆ ಬಿಂಬಿಸುವ ಜೋಗಯ್ಯ ಮತ್ತು ಬೈಕ್ ಗಳಮೂಲಕ ಮೂಲಕ ಶೋಭಾ ಯಾತ್ರೆ ನಡೆಸಿದರು.

ಕೇಸರಿ ಬಾವುಟಗಳೊಂದಿಗೆ ಜೈಕಾರ ಹಾಕುತ್ತಾ ಸಾಗಿದ ಯಾತ್ರೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದವರೆಗೆ ನಡೆಯಿತು.

ಸಂಜಯ ಚಿತ್ರಮಂದಿರದ ಆವರಣದಲ್ಲಿ ಸಾರ್ವಜನಿಕ ಸಭೆ ನಡೆದು ಹಿಂದುತ್ವದ ಪರ ಜಾಗೃತಿ ಮೂಡಿಸಲಾಯಿತು.

RELATED ARTICLES
- Advertisment -
Google search engine

Most Popular