ಮಂಡ್ಯ: ಕಾಂಗ್ರೆಸ್ ಬರಿ ಭಿಕ್ಷೆಗಳನ್ನು ಕೊಟ್ಟು ಜನರನ್ನು ಭಿಕ್ಷುಕರನ್ನಾಗಿ ಮಾಡ್ತಿದೆ. ಪ್ರತಿಯೊಬ್ಬರಿಗೂ ದಾರಿದ್ರ್ಯವನ್ನು ಹಂಚುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ ಸಿ ತಮ್ಮಣ್ಣ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮೈತ್ರಿ ಬಗ್ಗೆ ಜೆಡಿಎಸ್ ನಲ್ಲಿ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಎಲ್ಲಾ ಪಕ್ಷದಲ್ಲಿ ಅಸಮಾಧಾನ ಇದ್ದೆ ಇರುತ್ತೆ. ಯಾವ ಪಕ್ಷ ಶಾಶ್ವತವಾಗಿ ಒಂದೆ ಕಡೆ ಇಲ್ಲ. ಬಿಜೆಪಿ ಪಕ್ಷ ಏನು ಸ್ವತಂತ್ರವಾಗಿ ಹುಟ್ಟಿಬಂತಾ? ಜೆಡಿಎಸ್ ಜೊತೆ ಸೇರಿ ನಂತರ ಬಿಜೆಪಿ ಪಕ್ಷವಾಗಿದ್ದು. ಕಾಂಗ್ರೆಸ್ ಪಕ್ಷ ಏನು ಒಂದೇ ಪಕ್ಷ ಆಗಿದ್ಯಾ? ಈಗ 26 ಪಕ್ಷಗಳ ಜೊತೆ ಒಂದಾಗಿಲ್ವಾ? ಪಕ್ಷ ಉಳಿವಿಗಾಗಿ ಏನು ಮಾಡಬೇಕೋ ಅದನ್ನ ಮಾಡ್ತಾರೆ. ನಾವು ಅದನ್ನ ತಡೆಯಕ್ಕಾಗಲ್ಲ ಎಂದರು.
ನಾವು ಬಿಜೆಪಿ ಜೊತೆ ಒಂದಾದ್ರೆ ರಾಷ್ಟ್ರಕ್ಕೆ ಒಳ್ಳೆಯದಾಗುತ್ತೆ. ದೊಡ್ಡವರು ತೀರ್ಮಾನ ಮಾಡಿದ್ದಾರೆ, ಅದು ಇನ್ನು ಪೂರ್ಣ ಪ್ರಮಾಣದಲ್ಲಿ ತೀರ್ಮಾನವಾಗಿಲ್ಲ. ಅವರ ತೀರ್ಮಾನಕ್ಕೆ ನಾವು ಬದ್ದ ಎಂದು ತಿಳಿಸಿದರು.
ಮುಂದಿನ ಸಂಕ್ರಾಂತಿಗೆ ಸರ್ಕಾರ ಬೀಳುತ್ತೆ ಸಿಪಿವೈ ಹೇಳಿಕೆ ವಿಚಾರ ಕುರಿತು ಮಾತನಾಡಿ, ಹೇಳ್ತಾರೆ ಒಬೊಬ್ಬರು ಒಂದೊಂದು. ಅಷ್ಟು ಸುಲಭವಲ್ಲ. ಕಾದುನೋಡಬೇಕು ಅಷ್ಟೆ. ಯಾವುದೇ ಸರ್ಕಾರ ಆಗಲಿ 5 ವರ್ಷ ಸುಭದ್ರವಾಗಿರಲಿ. ಜನಕ್ಕೆ ಒಳ್ಳೆಯ ಸರ್ಕಾರ ಕೊಡಲಿ. ಅದರಿಂದ ಜನಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಅಗ್ತಿಲ್ಲ. ಬರಿ ಭಿಕ್ಷೆಗಳನ್ನ ಕೊಟ್ಟಿಕೊಂಡು ಜನರನ್ನ ಭಿಕ್ಷುರನ್ನಾಗಿ ಮಾಡ್ತಿದ್ದಾರೆ. ಕೃಷಿ ಕ್ಷೇತ್ರ ಅಭಿವೃದ್ಧಿಯಾದ್ರೆ ರಾಜ್ಯ ಅಭಿವೃದ್ಧಿಯಾಗಲಿದೆ. ಸಂಪತ್ತು ಹಂಚಿದರೆ ದಾರಿದ್ರ್ಯವನ್ನ ಹಂಚಿದಾಗೆ ಎಂದು 1950 ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ್ದು ಇವತ್ತು ನಿಜವಾಗ್ತಿದೆ. ಪ್ರತಿಯೊಬ್ಬರಿಗೂ ದಾರಿದ್ರ್ಯವನ್ನು ಹಂಚುತ್ತಿದ್ದಾರೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿಕೆ ವಿಚಾರಕ್ಕೆ, ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಡಿಸಿ ತಮ್ಮಣ್ಣ ಹೇಳಿದರು.