ಹೊಸೂರು : ಸಾಲಿಗ್ರಾಮ ಮಿರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿರ್ಲೆ ಗ್ರಾಮದ ವಿ.ಎಸ್ ನಂ.4.49/1, ಜಂಜರ್‌ನಂ: 949ರ ಗ್ರಾಮಠಾಣ ನಿವೇಶನ 15x 36 ಅಡಿಗಳ ವಿಸ್ತೀರ್ಣ ಹಾಗೂ ಅದಕ್ಕೆ ಹೊಂದಿಕೊಂಡಿರುವ ರಸ್ತೆಯನ್ನು ಗ್ರಾಮದ ಭಾರತಿ ಕೋಂ ಶೇಖರ್ ಎಂಬುವರು ಅಕ್ರಮವಾಗಿ ಒತ್ತುವರಿ ಮಾಡಿ ಕೊಂಡು ಮನೆ ನಿರ್ಮಿಸುತ್ತಿದ್ದು ತೆರವುಗೊಳಿಸುವಂತೆ ತಾ.ಪಂ. ಇಓ ಆದೇಶ ಮಾಡಿದ್ದು ಶೀಘ್ರ ತೆರವುಗೊಳಿಸಲು ಕ್ರಮ ವಹಿಸುವಂತೆ ಪತ್ರ ಬರೆಯಲು ಮಿರ್ಲೆ ಗ್ರಾ.ಪ.ಯಲ್ಲಿ ಅಧ್ಯಕ್ಷ ಬಾಲು ಅವರ ಅಧ್ಯಕ್ಷತೆಯಲ್ಲಿ ಇಂದು ನಡೆ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗ್ರಾಮದ ಸುಭಾಷ್ ರಸ್ತೆಯಲ್ಲಿರುವ ಭಾರತಿ ಕೋಂ ಶೇಖರ್ ಅವರು ಗ್ರಾಮ ಪಂಚಾಯತಿಗೆ ಅತ್ಯಂತ ಬೆಲೆ ಬಾಳುವ ನಿವೇಶನವನ್ನು ಒತ್ತುವರಿ ಮಾಡಿಕೊಂಡಿದ್ದು ಸದರಿ ಒತ್ತುವರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಈ ಸಂಬಂದ ಪಂಚಾಯತಿ ಸಭೆಯಲ್ಲಿ ಎಲ್ಲಾ ಸದಸ್ಯರು ಆಕ್ರಮವಾಗಿ ನಿರ್ಮಿಸಿರುವ ಕಟ್ಟಡ, ಗ್ರಾಮ ಪಂಚಾಯತಿಗೆ ಸೇರಿದ ಖಾಲಿನಿವೇಶನ ಪಂಚಾಯತಿ ಸುಪರ್ದಿಗೆ ವಶ ಪಡಿಸಿ ಕೊಳ್ಳುವಂತೆ ಚರ್ಚಿಸಿ ಸಭಾ ನಡಾವಳಿಯನ್ನು ಸಂಬಂದಪಟ್ಟ ತಾಲೂಕು ಪಂಚಾಯತ್ ಇಓ ಅವರಿಗೆ ದೂರಿನ ವರದಿ ಕಳುಹಿಸಿದ್ದು, ಇಓ ಅವರು ಸದರಿ ಕಟ್ಟಡ ಹಾಗೂ ನಿವೇಶನ ತೆರವುಗೊಳಿಸಲು ಮನವಿಯನ್ನು ಸ್ವೀಕರಿಸಿ ಹಾಗೂ ಅದನ್ನು ಪರಿಶೀಲಿಸಿ ನಂತರ ಸ್ವಯಂ ಪ್ರೇರಿತವಾಗಿ ಈ ನ್ಯಾಯಾಲಯವು ಪ್ರಕರಣವನ್ನಾಗಿ ಸ್ವೀಕರಿಸಿ ದಿನಾಂಕ:20/07/2023 ರಂದು ದಾಖಲಿಸಿಕೊಳ್ಳಲಾಯಿತು ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್’. ಅಧಿನಿಯಮದಂತೆ ಒತ್ತುವರಿಗಳನ್ನು ತೆರವುಗೊಳಿಸುವ ಆದೇಶ ನೀಡಿದ್ದಾರೆ. ಆದರೆ ಈಗಿನ ತಾ.ಪಂ.ಇಓ ಅವರು ಇದೂವರೆವಿಗೂ ತೆರವು ಮಾಡಲು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಗೋತ್ತಾಗುತ್ತಿಲ್ಲ. ಆದ್ದರಿಂದ ತಾ.ಪಂ.ಇಓ ಅವರು ಕೂಡಲೇ ಕ್ರಮ ವಹಿಸಬೇಕು ಇಲ್ಲದಿದ್ದಲಿ ತಾ.ಪಂ.ಕಚೇರಿ ಎದುರಿನಲ್ಲಿ ಎಲ್ಲಾ ಸದಸ್ಯರೊಡಗೂಡಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ಅಧ್ಯಕ್ಷ ಬಾಲು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾ, ಸದಸ್ಯರಾದ ಅಣ್ಣಯ್ಯ, ಬಲರಾಮ್, ಅರುಣ್, ಶರಾವತಿ, ಮಂಗಳ, ಸಿಂಧೂ, ಮಂಜುಳ, ಗೀತಮ್ಮ ಇದ್ದರು.