ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ದಸರೆಯನ್ನು ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಪ್ರವಾಸಿಗರನ್ನು ಸೆಳೆಯುವ ಚಾಲೆಂಜ್ ಪ್ರವಾಸೋದ್ಯಮ ಇಲಾಖೆ ಮೇಲಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಪ್ಲ್ಯಾನ್ ಮಾಡುತ್ತಿದೆ. ಅದರ ಒಂದು ಭಾಗ ದಸರಾ ಅಂಬಾರಿ ವಿಶೇಷ ಬಸ್ ಈ ಬಾರಿಯ ದಸರೆಗಾಗಿ ಪ್ರವಾಸೋದ್ಯಮ ಇಲಾಖೆ ಒಟ್ಟು ೬ ಅಂಬಾರಿ ಓಪನ್ ಬಸ್‌ಗಳನ್ನು ಸಿದ್ದಪಡಿಸಿದೆ. ಸಾಕಷ್ಟು ಆಕರ್ಷಕವಾಗಿರುವ ಈ ಅಂಬಾರಿ ಬಸ್‌ನಲ್ಲಿ ಪ್ರವಾಸಿಗರು ಮೈಸೂರನ್ನು ವಿಶೇಷವಾಗಿ ನೋಡಬಹುದಾಗಿದೆ.
ಅ. ೧೫ ರಿಂದ ವಿಶೇಷ ದಸರಾ ಅಂಬಾರಿ ಬಸ್‌ಗೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಬಸ್‌ಗೆ ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲ ಖುದ್ದು ಸಿಎಂ ಹಾಗೂ ಸಚಿವರು ಬಸ್‌ನಲ್ಲಿ ಪ್ರಯಾಣ ಮಾಡಲಿದ್ದಾರೆ. ದಸರಾ ದೀಪಾಲಂಕಾರ ಇರುವವರೆಗೂ ವಿಶೇಷ ಅಂಬಾರಿ ಬಸ್ ಸಂಚಾರವಿರುತ್ತದೆ. ಪ್ರತಿದಿನ ಸಂಜೆ ೬ ಗಂಟೆ ರಾತ್ರಿ ೮ ಗಂಟೆ ರಾತ್ರಿ ೯ ಗಂಟೆಗೆ ಬಸ್ ವ್ಯವಸ್ಥೆ ಇರುತ್ತದೆ. ಬಸ್‌ನ ಒಳಭಾಗ ೨೫ ಸೀಟು ಬಸ್ ಮೇಲ್ಭಾಗದಲ್ಲಿ ೨೦ ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್ ಒಳಭಾಗಕ್ಕೆ ೨೫೦ ರೂ. ದರ ಬಸ್ ಮೇಲ್ಭಾಗದಲ್ಲಿ ೫೦೦ ರೂ. ದರ ನಿಗದಿ ಮಾಡಲಾಗಿದೆ.